ಹೊಳೆನರಸೀಪುರ: ತಾಲ್ಲೂಕಿನ ಹರಿಹರಪುರದಲ್ಲಿ ಉಡಸಲಮ್ಮ, ದುರ್ಗಾಪರಮೇಶ್ವರಿ ರಜತ ಮಹೋತ್ಸವ ಹಾಗೂ ಶತ ಚಂಡಿಕಾ ಯಾಗ ಶುಕ್ರವಾರ ವೈಭವದಿಂದ ನಡೆಯಿತು.

ಹರಿಹರಪುರ ಸುತ್ತಮುತ್ತಲಿನ ಏಳು ಹಳ್ಳಿಗಳ ಜನರು ಒಟ್ಟಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಅತೀತಾನಂದನಾಥರು ವಹಿಸಿದ್ದರು.

ಪ್ರತಿನಿತ್ಯ ಶತ ಚಂಡಿ ಪಾರಾಯಣ, ಲಲಿತಾ ಮಹಾ ತ್ರಿಪುರಸುಂದರಿ ಪಂಚವಿಶತಿ ನಾಮ ಸ್ತೋತ್ರ ಪಠಣೆ, ದೇವಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ದೇವಿ ಮಹಾತ್ಮೆಯ ಉಪನ್ಯಾಸ, ಪ್ರತಿನಿತ್ಯ ಪ್ರಸಾದ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.

ಯಾಗದ ಪೂರ್ಣಾಹುತಿ ದಿನ ತವನಂದಿಯ ವೀರಭದ್ರೇಶ್ವರನ ಉತ್ಸವ, ಬೋರನಹಳ್ಳಿಯ ಬಸವೇಶ್ವರನ ಉತ್ಸವ, ಸಿಗರನಹಳ್ಳಿಯ ಬಾಣದೇವರ ಉತ್ಸವಗಳು ನಡೆದವು.

ಪ್ರತಿ ಹಳ್ಳಿಗಳ ಜನರು ಪೂರ್ಣಾಹುತಿಗೆ ವಿಶೇಷ ರೇಷ್ಮೆ ವಸ್ತ್ರ ಸೇವೆ ಸಮರ್ಪಿಸಿದರು. ಯಾಗದ ಪ್ರಸಾದ ಸಿದ್ಧಪಡಿಸಲು ಏಳು ಹಳ್ಳಿಗಳ ಪ್ರತಿಯೊಂದು ಮನೆಯಿಂದಲೂ ಅಕ್ಕಿ ಹಾಗೂ ಬೆಲ್ಲ ಸಂಗ್ರಹಿಸಿ, ಯಾಗ ಪೂಜಾ ಮಹೋತ್ಸವಕ್ಕೆ ನೀಡಿದರು.

ಪ್ರಧಾನ ಸೇವಾರ್ಥ ರಾದ ಚಂದ್ರಶೇಖರ್, ಪ್ರಶಾಂತ್ ಗೌಡರು ಕುಟುಂಬ ಸಮೇತ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಸುತ್ತಲ ಏಳು ಹಳ್ಳಿಗಳ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.