ಹೊಳೆನರಸೀಪುರ: ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುವುದು ಸಾಮಾನ್ಯ ಆದರೆ ಇಲ್ಲಿನ ಕೋಟೆ ಪಿಎಂಶ್ರೀ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೋಷಕರು ಕಾದು ಕುಳಿತಿದ್ದಾರೆ.

ಮಗುವಿಗೊಂದು ಸೀಟು ಕೊಡಿ ಎಂದು 100 ವರ್ಷ ಪೂರೈಸಿರುವ ಪಿಎಂಶ್ರೀ ಸರ್ಕಾರಿ ಶಾಲೆಗೆ ಪೋಷಕರು ಮನವಿ ಮಾಡುತ್ತಿದ್ದಾರೆ. ಎಲ್ಕೆಜಿಯಿಂದ 7 ನೇ ತರಗತಿ ವೆರೆಗೆ ಇರುವ ಶಾಲೆಯಲ್ಲಿ ಈ ಗಾಗಲೇ 416 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್.ಕೆ.ಜಿಯಿಂದ 1ನೇ ತರಗತಿಗೆ ಸೇರಿಸಲು 250ಕ್ಕೂ ಹೆಚ್ಚು ಪೋಷಕರು ಅರ್ಜಿ ಪಡೆದಿದ್ದಾರೆ.

ಶುಕ್ರವಾರ ಮುಖ್ಯ ಶಿಕ್ಷಕ ಬೇಲೂರೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿ.ಆರ್.ಪಿ ಚಂದ್ರಶೇಖರ್, ಶಾಲೆ ಪ್ರಾರಂಭದ ದಿನ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಬೇಕು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲಾ ಮಕ್ಕಳಿಗೆ ಗುರುಗಣೇಶ್ ಚಿಟ್ಸ್ ಸಂಸ್ಥೆಯವರು ಸಿಹಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲಿದ್ದಾರೆ. ಮಕ್ಕಳೊಂದಿಗೆ ಮಕ್ಕಳಗಾಗಿ ಪಾಠ ಹೇಳಿಕೊಡಿ. ಈ ಶಾಲೆಗೆ ಬರುವ ಯಾವ ಮಕ್ಕಳೂ ಅಳುತ್ತಾ ಶಾಲೆಗೆ ಬರಬಾರದು. ನಾನು ಶಾಲೆಗೆ ಹೋಗುತ್ತೇನೆ ಎಂದು ಸ್ವಯಂಪ್ರೇರಿತರಾಗಿ ಆಸಕ್ತಿ ಇಂದ ಬರುವಂತೆ ಮಾಡಿ ಎಂದು ಸಲಹೆ ನೀಡಿದರು.

ಕಳೆದ ವರ್ಷ ಶತಮಾನೋತ್ಸವ ಆಚರಿಸಿಕೊಂಡ ಈ ಶಾಲೆಯಲ್ಲೇ ಓದಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರಿ ಅನುಸೂಯ ಮಂಜುನಾಥ್ ಈ ಶಾಲೆಯ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ ಕಂಪ್ಯೂಟರ್ಗಳನ್ನು ಕೊಡುಗೆ ಆಗಿ ನೀಡಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ಬಿಸಿ ಊಟ, ಮೊಟ್ಟೆ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕ, ಶೈಕ್ಷಣಿಕ ಪ್ರವಾಸ ಎಲ್ಲವೂ ಕ್ರಮಬದ್ಧವಾಗಿ ಸಿಗುತ್ತಿರುವುದರ ಜೊತೆಗೆ ಉತ್ತಮ ಫಲಿತಾಂಶವೂ ಬರುತ್ತಿದೆ. ಈ ಶಾಲೆಯ ಎಲ್ಲಾ ಮಕ್ಕಳೂ ಅತ್ಯಂತ ಕ್ರಿಯಾಶೀಲರಾಗಿ ಬುದ್ಧಿ ವಂತರಾಗಿ ಇರುವುದನ್ನು ಪೋಷಕರು ಹಾಗೂ ಸಾರ್ವಜನಿಕರು ಗುರುತಿಸಿ ಪ್ರಶಂಶಿಸುತ್ತಿರುವುದರಿಂದ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಆಸಕ್ತಿ ಹೊಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-36-105123553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.