ಹೊಳೆನರಸೀಪುರ: ಅರಕಲಗೂಡು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹಾದಿ ಮಹದೇಶ್ವರ ದೇವಾಲಯದಲ್ಲಿ ಶುಕ್ರವಾರ ಮಂಡಲಪೂಜೆ ನಡೆಯಿತು. ಇದರ ಅಂಗವಾಗಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ಶ್ರೀಶಾಚಾರ್ ಮತ್ತು ತಂಡದವರು ಗಣಪತಿ ಹೋಮ, ರುದ್ರಹೋಮ, ಕಳಸ ಪ್ರತಿಷ್ಠಾಪನೆ, ಪಂಚಾಮೃತಾಭಿಷೇಕ ಮಾಡಿದರು.

ಈ ದೇವಾಲಯ ಪುರಾತನವಾದದ್ದು. ಕಳೆದ ವರ್ಷ ಈ ಹಳೆಯ ದೇವಾಲಯದಲ್ಲಿದ್ದ ವಿಗ್ರಹವನ್ನು ಕಳ್ಳರು ಕದ್ದುಕೊಂಡು ಹೋಗಿದ್ದರು. ಸುತ್ತಲ ಜನರು ಆತಂಕಕ್ಕೆ ಒಳಗಾಗಿದ್ದರು. ಕೃಷ್ಣಾಪುರ, ಕೃಷ್ಣಾಪುರ ಕೊಪ್ಪಲು, ಸುತ್ತಲಗ್ರಾಮದ ಭಕ್ತರು ಹಾಗೂ ಹೊಳೆನರಸೀಪುರದ ಹಾದಿ ಮಹದೇಶ್ವರನ ಭಕ್ತರ ಸಹಾಯದಿಂದ 48 ದಿನಗಳ ಹಿಂದೆ ನೂತನ ದೇವಾಲಯ ನಿರ್ಮಾಣಮಾಡಿ ಹೊಸ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಾಡಿಸಿ ದೇವಾಲಯ ಉದ್ಘಾಟಿಸಿದ್ದೆವು. ಅಂದಿನಿಂದ ಇಂದಿನ ವರೆಗೆ ಪ್ರತಿನಿತ್ಯ ಅಭಿಷೇಕ, ಅಲಂಕಾರ ಪೂಜೆ ನಡೆಯುತ್ತಿತ್ತು ಇಂದು 48ನೇ ದಿನದ ಮಂಡಲ ಪೂಜೆ ಮಾಡಿಸಿದೆವು ಎಂದು ಸಮಿತಿಯ ಎಚ್.ಆರ್. ಪ್ರಸನ್ನಕುಮಾರ್, ನಟೇಶ್ ವಿವರಿಸಿದರು.

ರಾಮನಾಥ್, ಉದಯಭಾನು, ಟೈಲರ್ ರೇವಣ್ಣ, ಗೋಕುಲ್, ಎ.ಆರ್. ರವಿಕುಮಾರ್, ರಾಜೇಂದ್ರ, ಮುಕುಂದ, ಅಮರ್ ನಾಗ್, ಮುರಳೀಧರಗುಪ್ತಾ, ಮಂಜುನಾಥ್ ಗುಪ್ತಾ, ನಾಗೇಂದ್ರ ಗುಪ್ತಾ ಮೆಡಿಕಲ್ ರಾಮು, ವೆಂಕಟೇಶ್ಬಾಬು, ರಮೇಶ್, ಭಾವೇಶ್, ರೂಪ ಪ್ರಸನ್ನ, ಲಕ್ಷ್ಮೀನಾಗೇಂದ್ರ ಗುಪ್ತಾ, ಚಂದ್ರಶೇಖರ್, ತಟ್ಟೇಕೆರೆ ಯೋಗಣ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-36-1851454031

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.