ಹೊಳೆನರಸೀಪುರ: ಇಲ್ಲಿನ ಕೈಗಾರಿಕಾ ಪ್ರದೇಶದ ಅರ್ಫಾದ್ ಹುಸೇನ್ ಕಿಂಗ್ ಟಿಂಬರ್ಸ್ ಆ್ಯಂಡ್ ಟ್ರೇಡರ್ಸ್ ಗೋದಾಮಿಗೆ 16 ಚಕ್ರಗಳಿರುವ ಲಾರಿಯಲ್ಲಿ 25 ಟನ್ ಅಕೇಷಿಯಾ ಕಟೇಚು ಮರದ ತುಂಡುಗಳನ್ನು ತುಂಬಿಕೊಂಡು ಬರಲಾಗಿದ್ದು, ಕೆಲವರು ಮೊಬೈಲ್ನಲ್ಲಿ ಪೋಟೊ ತೆಗೆಯಲು ಯತ್ನಿಸಿದಾಗ ಮರವನ್ನು ಇಳಿಸುತ್ತಿದ್ದವರು ಲಾರಿಬಿಟ್ಟು ಓಡಿಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ‘ಇದನ್ನು ಬೀದರನಿಂದ ತಂದಿದ್ದಾರೆ. ಇದಕ್ಕೆ ಪರವಾನಗಿ ಇದೆ’ ಎಂದು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದ ಕೆಲವರು ಬೀದರನಿಂದ ಇಲ್ಲಿಗೆ ತರಲು ಕಾರಣ ಏನು? ಈ ಬೆಲೆ ಬಾಳುವ ಮರದ ತುಂಡುಗಳು ಇಲ್ಲಿಂದ ಎಲ್ಲಿಗೆ ಹೋಗುತ್ತವೆ? ಇಲ್ಲಿಂದ ಹೊರಹೋಗಲು ಪರವಾನಗಿ ನೀಡಲು ಅರಣ್ಯ ಇಲಾಖೆಯವರಿಗೆ ಅಧಿಕಾರ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದವು.

‘ಇಂತಹ ಮರದ ಲಾರಿಗಳು ಇದುವರೆಗೂ ಅನೇಕ ಬಾರಿ ಇಲ್ಲಿಂದ ಹೋಗಿದ್ದು, ಈ ಬೆಲೆಬಾಳುವ ಮರಕ್ಕೆ ಕಾಡುಮರ ಎಂದು ಪರವಾನಗಿ ಕೊಟ್ಟು ಕಳುಹಿಸುತ್ತಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಕಾಡುಮರ ಎಂದು ಪರವಾನಗಿ ಪಡೆದು ಹೋಗಿರುವ ಮರಗಳೆಲ್ಲ ಬೆಲೆಬಾಳುವ ಮರಗಳೇ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಅಕ್ರಮ ಎಸಗಿದ್ದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಈ ಬಗ್ಗೆ ತನಿಖೆ ಪರಿಶೀಲಿಸಲಾಗುತ್ತಿದ್ದು, ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಎಫ್ ಸೌರಭ್ಕುಮಾರ್ ತಿಳಿಸಿದ್ದಾರೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-36-2023914574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.