ಹೊಳೆನರಸೀಪುರ: ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಫೆ.24ರಂದು ಪ್ರಾರಂಭವಾಗಿದ್ದ ವಿಶೇಷ ಪೂಜೆ ಹಾಗೂ ಉತ್ಸವಗಳು ಏ.5ರಂದು ಸಂಜೆ ಮೂರು ದೇವರ ಉತ್ಸವದ ನಂತರ ಮುಕ್ತಾಯವಾಯಿತು.

ಭಾನುವಾರ ಬೆಳಿಗ್ಗೆ ಲಕ್ಷ್ಮೀನರಸಿಂಹನಿಗೆ ಅಭಿಷೇಕ, ಅಲಂಕಾರ ಪೂಜಾ ವಿಧಿ ವಿಧಾನಗಳು ನಡೆದು 12 ಗಂಟೆಗೆ ಮಹಾಮಂಗಳಾರತಿ ಮಾಡಿ ತೀರ್ಥಪ್ರಸಾದ ನೀಡಲಾಯಿತು. ಸಂಜೆ ಲಕ್ಷ್ಮೀನರಸಿಂಹಸ್ವಾಮಿ, ಗೋಪಾಲಕೃಷ್ಣಸ್ವಾಮಿ ಮತ್ತು ನಾರಾಯಣಸ್ವಾಮಿ ದೇವರ ಉತ್ಸವಮೂರ್ತಿಗಳನ್ನು ವಿದ್ಯುತ್ ದೀಪಾಲಂಕೃತ ಮೂರು ಪುಟ್ಟ ರಥಗಳ ಮೇಲೆ ಕೂರಿಸಿ ಪೂಜೆ ಮಾಡಿ ಕೋಟೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ರಘುಪತಿ ದೇವಾಲಯ ಆವರಣಕ್ಕೆ ತೆರಳಿ ವಾಪಸ್ ಕರೆತರಲಾಯಿತು.

ಉತ್ಸವದಲ್ಲಿ ವೀರಗಾಸೆ ನೃತ್ಯ, ವೇದ ಪಾರಾಯಣ, ನಾದಸ್ವರವಾದನ, ಶಾರದ ಶಂಕರ ಭಜನಾ ಮಂಡಳಿ, ಸೌಂದರ್ಯ ಲಹರಿ ಮಹಿಳಾ ಮಂಡಳಿ ಹಾಗೂ ಮಹಿಳಾ ಹರಿದಾಸ ಮಂಡಳಿಯವರು ಭಜನೆ, ದೇವರನಾಮ, ಕೋಲಾಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಅರ್ಚಕರಾದ ಎಚ್.ಆರ್.ನಾರಾಯಣ, ರಾಮಪ್ರಸಾದ್, ಹಳೇಬೀಡು ಪ್ರಸಾದ್, ಸುಬ್ರಮಣ್ಯ, ವಿಜಯ್ಕುಮಾರ್, ಹೆರಗು ರಮೇಶ್, ಶಂಕರ್, ಇತರರು ಪೂಜಾ ಕಾರ್ಯ ನಡೆಸಿದರು.

ವಕೀಲರಾದ ಆರ್.ಡಿ.ರವೀಶ್, ರಾಮಪ್ರಸನ್ನ, ಜಯಪ್ರಕಾಶ್, ವೆಂಕಟೇಶ್, ಎಚ್.ವಿ.ಸುಜಯ್ ಕುಮಾರ್,ಕೇಶವಮೂರ್ತಿ, ಸುಹಾಸ್, ಸಂತೋಷ್, ರಾಘವೇಂದ್ರ ಹೆಬ್ಬಾರ್, ಎಸ್.ಗೋಕುಲ್, ನಿವೃತ್ತ ಶಿಕ್ಷಕಿ ರಮಾ ಮಣಿ, ರಜನಿ,ಮಮತಾ, ಭಾರ್ಗವಿ, ರೇಖಾ ರಮೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-36-1809096006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.