ಹೊಳೆನರಸೀಪುರ: ಪಟ್ಟಣದ ಕೆಲವು ಬಡಾವಣೆಗಳಲ್ಲಿ, ಕೆಲವರು ಸ್ಯಾನಿಟರಿ ಪ್ಯಾಡ್, ಪ್ಯಾಂಟೀಸ್ಗಳನ್ನು ಶೌಚಾಲಯಕ್ಕೆ ಹಾಕುತ್ತಿರುವುದರಿಂದ ಪದೇ ಪದೇ ಒಳಚರಂಡಿ ಕಟ್ಟಿಕೊಳ್ಳುತ್ತಿದ್ದು, ಗಬ್ಬುನಾರುತ್ತಿದೆ. ಪ್ರತಿ ದಿನ ಒಳಚರಂಡಿ ಕಟ್ಟಿಕೊಂಡಿರುವ ಬಗ್ಗೆ ಪುರಸಭೆಗೆ ದೂರುಗಳು ಬರುತ್ತಿವೆ.

‘ನಾವು ಬ್ಲಾಕ್ ಆಗಿರುವುದನ್ನು ತೆರವುಗೊಳಿಸಿದಾಗ ಅದರಲ್ಲಿ ಸ್ಯಾನಿಟರ್ ಪ್ಯಾಡ್, ಪ್ಯಾಂಟೀಸ್ ಹಾಗೂ ಬಟ್ಟೆಗಳು ಕಂಡುಬರುತ್ತಿವೆ. ಮನೆಗಳ ಶೌಚಾಲಯದ ಕಮೋಡ್ಗಳಲ್ಲಿ ಯಾವುದೇ ರೀತಿಯ ಬಟ್ಟೆಗಳನ್ನು ಹಾಕಬಾರದು’ ಎಂದು ಪುರಸಭೆಯ ಪರಿಸರ ಎಂಜಿನಿಯರ್ ರಚಿದರ್ಶಿನಿ ಮನವಿ ಮಾಡಿದರು.

ಲಕ್ಷ್ಮೀನರಸಿಂಹ ದೇವಾಲಯ ರಸ್ತೆಯ ಕಾರ್ಯಾಲಯ ಬಡಾವಣೆ ತಿರುವಿನಲ್ಲಿ ಮಂಗಳವಾರ ಬೆಳಿಗ್ಗೆ ಒಳಚರಂಡಿ ಕಟ್ಟಿಕೊಂಡು ರಸ್ತೆ ಮೇಲೆ ಹರಿಯುತ್ತಿತ್ತು. ರಸ್ತೆಯ ಅಕ್ಕಪಕ್ಕದ ಹೋಟೆಲ್, ಕ್ಯಾಂಟೀನ್ಗಳಲ್ಲಿ ಕುಳಿತುಕೊಳ್ಳಲು ಸಾಧ್ಯ ಇಲ್ಲದಷ್ಟು ಗಬ್ಬು ವಾಸನೆ ಬರುತ್ತಿದೆ ಎಂದು ದೂರು ಬಂದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಅದರಲ್ಲಿ ಸ್ಯಾನಿಟರಿ ಪ್ಯಾಡ್, ಪ್ಯಾಂಟೀಸ್, ಬಟ್ಟೆಗಳೇ ತುಂಬಿದ್ದವು. ಯಂತ್ರದ ಸಹಾಯದಿಂದ ಎಲ್ಲವನ್ನೂ ತೆರವುಗೊಳಿಸಿ ಸರಾಗವಾಗಿ ಒಳಚರಂಡಿ ಗಲೀಜು ಹರಿದುಹೋಗುವಂತೆ ಮಾಡಿದ್ದೇವೆ. ಯಾವುದೇ ರೀತಿಯ ಬಟ್ಟೆಗಳನ್ನು ಮನೆಗಳ ಶೌಚಾಲಯದಲ್ಲಿ ಹಾಕಬಾರದು ಎಂದು ಅವರು ವಿನಂತಿಸಿದ್ದಾರೆ.

ಸ್ವಚ್ಚತಾ ಮೇಲ್ವಿಚಾರಕ ಮಾದಯ್ಯ, ಒಳಚರಂಡಿ ಸ್ವಚ್ಛತಾ ವಾಹನದ ಚಾಲಕ ಮಂಜು, ಪೌರಕಾರ್ಮಿಕರಾದ ಪ್ರಶಾಂತ, ಸ್ವಾಮಿ, ಓಬಳೇಶ ಯಂತ್ರದ ಸಹಾಯದಿಂದ ಒಳಚರಂಡಿ ಸ್ವಚ್ಛಗೊಳಿಸಿದರು.

ಇಂದಿರಾ ಕ್ಯಾಂಟೀನ್ ಪ್ರಾರಂಭ:

ಅಡುಗೆ ಅನಿಲ ಸಮಸ್ಯೆಯಿಂದ ಕಳೆದೆರೆಡು ದಿನಗಳಿಂದ ಮುಚ್ಚಲಾಗಿದ್ದ ಇಂದಿರಾ ಕ್ಯಾಂಟೀನ್ ಪುನರಾರಂಭವಾಗಿದೆ. ಇಂದಿರಾ ಕ್ಯಾಂಟೀನ್ಗೆ ವಾಣಿಜ್ಯ ಬಳಕೆಯ ಸಿಲಿಂಡರ್ಗಳು ಇನ್ನೂ ಸರಬರಾಜು ಆಗಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ ಎಂದು ಎಂಜಿನಿಯರ್ ರುಚಿ ದರ್ಶಿನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.