ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಹೆಣ್ಣು ಹೋರಾಡಬಲ್ಲೆ’ ಸ್ಪರ್ಧೆ ಏರ್ಪಡಿಸಲಾಗಿದೆ: ಪುಷ್ಪಾ ಅಮರನಾಥ್‌

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌
Last Updated 11 ಮಾರ್ಚ್ 2022, 15:39 IST
ಅಕ್ಷರ ಗಾತ್ರ

ಹಾಸನ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾಕಾಂಗ್ರೆಸ್ ವತಿಯಿಂದ ‘ನಾನು ಹೆಣ್ಣು ಹೋರಾಡಬಲ್ಲೆ’ ಎಂಬ ಸ್ಪರ್ಧೆಆಯೋಜಿಸಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿದರು.

‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ತಾವು ನಡೆದು ಬಂದಹಾದಿಯ ಕುರಿತು ಹಾಗೂ ತಮ್ಮ ಸ್ಫೂರ್ತಿದಾಯಕ ಅನುಭವಗಳ ಕುರಿತು 3ನಿಮಿಷ ವಿಡಿಯೋ ಚಿತ್ರೀಕರಿಸಿ ಕಳುಹಿಸಬೇಕು. 18 ವರ್ಷದೊಳಗಿನವರು, 18 ರಿಂದ 35 ವರ್ಷದೊಳಗಿನವರು ಹಾಗೂ 35 ವರ್ಷ ಮೇಲ್ಪಟ್ಟವರುಹೀಗೆ ಮೂರು ವಿಭಾಗಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಅಂಗವಿಕಲರುಮತ್ತು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ವಿಭಾಗ ಮಾಡುವ ಆಲೋಚನೆ ಇದೆ. ಈ ಸ್ಪರ್ಧೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರುಭಾಗವಹಿಸುವಂತಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರತಿ ವಿಭಾಗದಿಂದ 2 ರಂತೆ ಒಟ್ಟು 6 ವಿಜೇತರನ್ನು ಆಯ್ಕೆಮಾಡಲಾಗುವುದು. ಆಯ್ಕೆಯಾದ ವಿಡಿಯೋಗಳನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ವಿಡಿಯೋಗಳನ್ನು ವಾಟ್ಸ್‌ ಆ್ಯಪ್‌ ಸಂಖ್ಯೆ;9355418897 ಹಾಗೂ ಇ–ಮೇಲ್ ವಿಳಾಸ ;LHLSHcontest@gmail.com ಇಲ್ಲಿಗೆಕಳುಹಿಸಬಹುದು. ಏ.8 ಕೊನೆ ದಿನ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸಂಘಟನೆಗಾಗಿ ಡಿಜಿಟಲ್‌ ಆ್ಯಪ್ ಮೂಲಕ ಸದಸ್ಯತ್ವನೋಂದಣಿ ಅಭಿಯಾನ ಆರಂಭಿಸಿದ್ದು, ಮಾರ್ಚ್ 31 ಕೊನೆ ದಿನ. ಜಿಲ್ಲೆಯಲ್ಲಿ 10ಸಾವಿರ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಈ ಚುನಾವಣೆಯಿಂದ ತಕ್ಕಮಟ್ಟಿಗೆಪಾಠ ಕಲಿತಿದ್ದೇವೆ. 2023ಕ್ಕೆ ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಹಾಗೂ ಸಂಘಟಿತವಾಗಿ ಹೆಜ್ಜೆ ಇಡಬೇಕು ಎಂಬುದನ್ನುಕಲಿತಿದ್ದೇವೆ. ಲೋಪಗಳನ್ನು ಪಟ್ಟಿ ಮಾಡಲಾಗಿದೆ. ಮುಂದಿನಚುನಾವಣೆ ವೇಳೆಗೆ ಎಲ್ಲವನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪುಷ್ಪಾ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಮ್ಮ,ಜಿಲ್ಲಾ ಘಟಕದ ಅಧ್ಯಕ್ಷೆ ತಾರಾ ಚಂದನ್‌, ಮುಖಂಡರಾದ ಗಾಯತ್ರಿ ಆನಂದ್‌, ರತ್ನಮ್ಮ, ರಹೀಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT