ಜನಪರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಕೆ. ಸಂದೇಶ್ ಆಯ್ಕೆ

7
ಅ.7ಕ್ಕೆ ದಲಿತ ಚಳವಳಿ ಸಮ್ಮೇಳನ

ಜನಪರ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಚ್.ಕೆ. ಸಂದೇಶ್ ಆಯ್ಕೆ

Published:
Updated:
Deccan Herald

ಹಾಸನ: ನಾಗಭೂಮಿ ವಿವಿದೋದ್ದೇಶ ಅಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುವ 5 ನೇ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನಧ್ಯಕ್ಷರನ್ನಾಗಿ ಹಿರಿಯ ದಲಿತ ಮುಖಂಡ, ಚಿಂತಕ ಎಚ್.ಕೆ. ಸಂದೇಶ್ ಅವರನ್ನು ಆಯ್ಕೆ ಮಾಡಲಾಯಿತು.

ನಗರದ ಮಾನವ ಬಂಧುತ್ವ ವೇದಿಕೆಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ದಲಿತ ಸಂಘಟನೆಗೆ ಸಲ್ಲಿಸಿದ ಸೇವೆ, ಸುದೀರ್ಘ ಹೋರಾಟ ಪರಿಗಣಿಸಿ ಆಯ್ಕೆ ಮಾಡಲಾಗಿದೆ. ದಲಿತ ಚಳವಳಿಯ ಹಿರಿಯ ನಾಯಕರಾದ ಕೆ. ಈರಪ್ಪ, ನಾರಾಯಣದಾಸ್ ಹಾಗೂ ಶಂಕರ್ ರಾಜ್ ಹೆಸರು ಪ್ರಸ್ತಾಪವಾಯಿತು. ಅಂತಿಮವಾಗಿ ದಲಿತ ನಾಯಕ ತ್ಯಾಗಿ ಒಡನಾಡಿ ಆಗಿದ್ದ ಸಂದೇಶ್ ಹೆಸರನ್ನು ಅಂತಿಮಗೊಳಿಸಲಾಯಿತು. ಸಮ್ಮೇಳನ ಅ. 7 ಕ್ಕೆ ಹಾಸನದ ಕಲಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಹೆತ್ತೂರು ತಿಳಿಸಿದರು.

ಕಲಾವಿದ ಗ್ಯಾರಂಟಿ ರಾಮಣ್ಣ ಮಾತನಾಡಿ, 70 ರ ದಶಕದ ದಲಿತ ಹೋರಾಟದ ಮುಂಚೂಣಿಯ ನಾಯಕರಲ್ಲಿ ಒಬ್ಬರಾದ ಸಂದೇಶ್ ಅವರ ಹೋರಾಟವೇ ಒಂದು ಕಾವ್ಯ ಇದ್ದಂತೆ. ಜಿಲ್ಲೆಯ ಎಲ್ಲಾ ದಲಿತ ನಾಯಕರನ್ನು ಒಳಗೊಂಡ ಪುಸ್ತಕವನ್ನು ಹೊರತರಬೇಕು. ಉದ್ಘಾಟನೆಗೆ ನಿಜಗುಣಾನಂದ ಸ್ವಾಮೀಜಿ ಅಥವಾ ನಿಡುಮಾಮಿಡಿ ಸ್ವಾಮೀಜಿ ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಪೌರ ಕಾರ್ಮಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಸರ್ಕಾರಿ ನೌಕರರಾಗಿ ನಿವೃತ್ತಿ ಹೊಂದಿರುವ ಸಂದೇಶ್ ಇಡೀ ಜೀವನವನ್ನು ದಲಿತರು, ಶೋಷಿತರ ಪರವಾಗಿ ಸಮರ್ಪಿಸಿಕೊಂಡಿದ್ದಾರೆ. ಸಮ್ಮೇಳನಧ್ಯಕ್ಷರನ್ನಾಗಿ ಮಾಡುವುದರಿಂದ ಹೋರಾಟಕ್ಕೆ ಬಲ ನೀಡಿದಂತೆ ಎಂದು ನುಡಿದರು.

ಪ್ರಕೃತಿ ಸೇವಾ ಸಂಸ್ಥೆ ವರ್ಷಾ ಮಾತನಾಡಿ, ಸಮ್ಮೇಳನದಲ್ಲಿ ಪೌರ ಕಾರ್ಮಿಕರು ಹಾಗೂ ಮಂಗಳಮುಖಿಯರ ಹಕ್ಕುಗಳ ಕುರಿತು ಚರ್ಚಿಸಬೇಕು. ಈ ಕುರಿತು ನಾಟಕ ಪ್ರದರ್ಶನ ನಡೆಸಬೇಕು ಎಂದರು.

ಪೌರ ಕಾರ್ಮಿಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ನಲ್ಲಪ್ಪ, ಪೃಕೃತಿ ಸೇವಾ ಸಂಸ್ಥೆಯ ಅಶ್ವಥ್, ಹೋರಾಟಗಾರ್ತಿ ಶೋಭಾ, ರಾಜ್ಯ ಮಾನವ ಹಕ್ಕು ಹಾಗೂ ಪತ್ರಕರ್ತರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎನ್. ಮೂರ್ತಿ, ಮಾರ, ಭವ್ಯ ನಾಗರಾಜ್, ಮುನಿಯಪ್ಪ, ದೇವರಾಜ್, ಗೋವಿಂದರಾಜ್ , ಶಾಂತರಾಜ್, ರಾಮು, ಪರಶು, ಸಣ್ಣಪ್ಪಯ್ಯ ಪರಶುರಾಮ್ ಕೃಷ್ಣ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !