ಜನರ ಭಾವನೆ ಕೆರಳಿಸುತ್ತಿರುವ ಬಿಜೆಪಿ: ಬಸವರಾಜ್‌ ಹೊರಟ್ಟಿ

ಬುಧವಾರ, ಏಪ್ರಿಲ್ 24, 2019
28 °C
ಮೈತ್ರಿ ಕೂಟಕ್ಕೆ 18 ಸ್ಥಾನ ಗೆಲುವು : ಹೊರಟ್ಟಿ ವಿಶ್ವಾಸ

ಜನರ ಭಾವನೆ ಕೆರಳಿಸುತ್ತಿರುವ ಬಿಜೆಪಿ: ಬಸವರಾಜ್‌ ಹೊರಟ್ಟಿ

Published:
Updated:
Prajavani

ಹಾಸನ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟವು 18ರಿಂದ 19 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ್ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ಮೊದಲ ಬಾರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಪ್ರಚಾರ ಮಾಡುತ್ತಿರುವುದರಿಂದ ಈ ಚುನಾವಣೆ ವಿಭಿನ್ನವಾಗಿದೆ. ಹಿಂದಿನ ಚುನಾವಣೆಗಿಂದ ಈ ಬಾರಿ ಮೈತ್ರಿ ಕೂಟದ ಅಭ್ಯರ್ಥಿಗಳು ಉತ್ತಮ ಫಲಿತಾಂಶ ತಂದು ಕೊಡಲಿದ್ದಾರೆ. ಹಾಗಾಗಿ ಬಿಜೆಪಿಗೆ ಈ ಬಾರಿ ಕಡಿಮೆ ಸ್ಥಾನ ಕಡಿಮೆ ಬರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭವಿಷ್ಯ ನುಡಿದರು.

ಉತ್ತರ ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಆದರೆ, ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗೊತ್ತಿ ಮೈತ್ರಿ ಕೂಟದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ಹಾಸನದ ಕೆಲ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮೋದಿ ಪರ ಘೋಷಣೆ ಕೂಗಿಸುವ ಕೆಲಸವನ್ನು ಬಿಜೆಪಿಯವರೇ ಮಾಡಿಸುತ್ತಿದ್ದಾರೆ. ಜನರ ಭಾವನೆ ಕೆರಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಕೆಲಸ ಮಾಡುವುದರಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ ಎಂದು ಕಿಡಿಕಾರಿದರು.

‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ. ಸಿನಿಮಾದವರಿಗೆ ನಮ್ಮಷ್ಟು ರಾಜಕಾರಣ ಗೊತ್ತಿಲ್ಲ. ನಮಗೆ ಎಲ್ಲಿ ಮತಗಳು ಬರುವುದಿಲ್ಲವೋ ಅಂತಹ ಕಡೆಗಳಲ್ಲಿ ಸರಿ ಪಡಿಸಿಕೊಳ್ಳುವಂತಹ ಕೆಲಸ ಮಾಡುತ್ತೇವೆ. ಆದರೆ, ಸಿನಿಮಾದವರಿಗೆ ಅದು ತಿಳಿಯದ ವಿಚಾರ’ ಎಂದರು.

ಸುಮಲತಾ ಹೆಣ್ಣು ಮಗಳು. ಅವರಿಗೆ ಗೌರವ ಕೊಡಬೇಕು. ಕೆಲ ಮುಖಂಡರ ಹೇಳಿಕೆಗಳಿಂದ ಅವರಿಗೆ ಪ್ರಚಾರ ಸಿಕ್ಕಿದೆ ಅಷ್ಟೇ. ಮತಗಳಾಗಿ ಪರಿವರ್ತನೆ ಆಗುವುದಿಲ್ಲ. ಮದುವೆಯಾಗಿ ಬಂದ ಹೆಣ್ಣು ಮಗಳು ಸ್ಥಳೀಯಳಾಗುತ್ತಾಳೆ. ಹೀಗಾಗಿ ಅಗೌರವದಿಂದ ಯಾರು ನಡೆದುಕೊಳ್ಳಬಾರದು. ಅಕ್ಕ, ತಂಗಿಗೆ ನೀಡುವ ಗೌರವವನ್ನು ಆಕೆಗೂ ಕೊಡಬೇಕು’ ಎಂದು ಕಿವಿಮಾತು ಹೇಳಿದರು.

ಹಿಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಬಹಳಷ್ಟು ಅಂತರವಿದೆ. ಜನರು ಕೆಲಸ ಮಾಡಿದ ವ್ಯಕ್ತಿಯನ್ನು ಸೋಲಿಸುತ್ತಾರೆ. ಹಿಂದೆ ಸೈದಾಂತಿಕ ಸಿದ್ದಾಂತ, ನೈತಿಕತೆ ಇತ್ತು. ಪ್ರಸ್ತುತ ಅವು ಕಣ್ಮರೆಯಾಗಿದೆ. ಪ್ರಸ್ತುತ ರಾಜಕಾರಣದಲ್ಲಿ ಹಣ, ಜಾತಿ ಬಂದು ಬಿಟ್ಟಿದೆ. ರಾಜಕೀಯದಲ್ಲಿ ಯಾರಿಗೂ ಬದ್ಧತೆ ಇಲ್ಲದಂತಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧ ನಡೆಯುವಂತಹ ಸನ್ನಿವೇಶಗಳನ್ನು ಇಂದಿನ ರಾಜಕಾರಣದಲ್ಲಿ ನೋಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಜೆಡಿಎಸ್‌ ಮುಖಂಡರಾದ ಬಾಳುಪೇಟೆ ಜಗನ್ನಾಥ್, ದೇವರಾಜ್, ಹೊಂಗೆರೆ ರಘು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !