ಜಾವಗಲ್: ಇಲ್ಲಿನ ದೇವಾಂಗ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ರಾಮ ನವಮಿ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಓಕುಳಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಬನಶಂಕರಿ ದೇವಾಲಯದಲ್ಲಿ ಇರಿಸಲಾಗಿದ್ದ ಪರಿವಾರ ಸಹಿತ ಸೀತಾರಾಮರ ಉತ್ಸವ ಮೂರ್ತಿಗೆ ಅರಿಸಿನ ಹಾಗೂ ಕುಂಕುಮದ ನೀರಿನಿಂದ ಅಭಿಷೇಕ ಮಾಡಿ, ನಂತರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಣ್ಣದ ಓಕುಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಓಕಳಿ ಉತ್ಸವದ ಅಂಗವಾಗಿ ಸೀತಾರಾಮರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೇಲೆ ಇರಿಸಿ, ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಉತ್ಸವ ಮೂರ್ತಿಯ ಮೆರವಣಿಗೆ ಉದ್ದಕ್ಕೂ ಮಕ್ಕಳು, ಯುವಕರು, ಹಾಗೂ ಮಹಿಳೆಯರು ಪರಸ್ಪರ ಬಣ್ಣದಾಟದಲ್ಲಿ ಮಿಂದೆದ್ದರು.

ಸಂತೆ ಮೈದಾನದಲ್ಲಿ ದೇವರ ಮೂರ್ತಿಗೆ ವಿವಿಧ ಪ್ರತ್ಯೇಕ ಬಣ್ಣಗಳಿಂದ ಸಿದ್ಧಪಡಿಸಿದ ಜಲದಿಂದ ಅಭಿಷೇಕ ಮಾಡಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಸೇರಿಸುವ ಮೂಲಕ ರಾಮನವಮಿ ಹಾಗೂ ಓಕಳಿ ಉತ್ಸವಕ್ಕೆ ಸಂಪನ್ನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-36-71995219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.