ಜಾವಗಲ್: ಜೋಳ ಕಟಾವು ಮಾಡಿದ ಬಳಿಕ ಆ ಜೋಳದ ಬುಡದಿಂದ ಬರುವ ಚಿಗುರಿನಲ್ಲಿ (ಎಚ್ಸಿಎನ್ ಪಾಯಿಸನ್) ಸೈನೈಡ್ ವಿಷಕಾರಿ ಅಂಶ ಹೆಚ್ಚಿರುತ್ತದೆ. ಈ ಜೋಳದ ಚಿಗುರನ್ನು ತಿಂದಿರುವ ನೂರಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿದ್ದು, ಇವುಗಳ ಪೈಕಿ 58 ಕುರಿಗಳು ಸಾವನ್ನಪ್ಪಿವೆ ಎಂದು ಪಶುಸಂಗೋಪನೆ, ಪಶುವೈದ್ಯ ಇಲಾಖೆ ಉಪ ನಿರ್ದೇಶಕ ಡಾ.ಬಿ.ಕೆ. ರಮೇಶ್ ತಿಳಿಸಿದರು.

ಹೋಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ ಬೇಸಿಗೆ ಜೋಳದ ಚಿಗುರು ತಿಂದು ಸುಮಾರು 58 ಕುರಿಗಳು ಬುಧವಾರ ಸಾವನ್ನಪ್ಪಿದ ಹಿನ್ನೆಲೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇನ್ನುಳಿದ ಕುರಿಗಳಿಗೆ ಜಾವಗಲ್ ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಿದ್ದು, 42 ಕುರಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಪ್ರಾಣಾಪಾಯದಿಂದ ಪಾರಾಗಿವೆ ಎಂದು ತಿಳಿಸಿದರು.

ಹಾಸನದ ಪಶು ಮಹಾವಿದ್ಯಾಲಯದ ತಜ್ಞರ ತಂಡವು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದೆ. ಮೃತಪಟ್ಟಿರುವ ಕುರಿಗಳ ಅಂಗಗಳ ಮಾದರಿ ಸಂಗ್ರಹಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಮೃತಪಟ್ಟಿರುವ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಎರಡೂ ವರದಿಗಳನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸರ್ಕಾರದ ಸಣ್ಣ ಪ್ರಾಣಿಗಳ ಪರಿಹಾರ ನಿಧಿ (ಎಕ್ಸ್ ಗ್ರೇಷಿಯಾದ) ಮೂಲಕ ಕುರಿ ಅಭಿವೃದ್ಧಿ ಮಂಡಳಿಯಿಂದ ಮೃತಪಟ್ಟಿರುವ ಪ್ರತಿಯೊಂದು ಕುರಿಗೂ ₹7,500 ಪರಿಹಾರವಾಗಿ ನೀಡಲು ಅವಕಾಶವಿದೆ ಎಂದರು.

ಪಶು ಸಂಗೋಪನಾ ಇಲಾಖೆ ಅರಸೀಕೆರೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ಶಶಿಕಾಂತ್ ಬೂದಿಹಾಳ, ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್, ಹಾಸನದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಪವನ್ ಕುಮಾರ್, ಜಾವಗಲ್ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಆನಂದ್, ಡಾ. ಸಂತೋಷ್, ಹಿರಿಯ ಪಶು ಪರೀಕ್ಷಕ ನಾಗರಾಜ್, ಡಾ. ರವಿಕುಮಾರ್, ಡಾ. ನಾಗಪ್ಪ ಕರಿಬಸಪ್ಪನವರ, ಕುರಿಗಾಹಿಗಳಾದ ರಂಗನಾಥ್, ರಾಮಣ್ಣ, ಮಹಾಂತೇಶ್ ಉಪಸ್ಥಿತರಿದ್ದರು.

ಶಾಸಕ ಸುರೇಶ್ ಭೇಟಿ

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಚ್.ಕೆ. ಸುರೇಶ್ ಕುರಿಗಾಹಿಗಳಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು ಜೀವನೋಪಾಯಕ್ಕಾಗಿ ಗ್ರಾಮದಿಂದ ಗ್ರಾಮಕ್ಕೆ ತಮ್ಮ ಕುರಿಗಳನ್ನು ಮೇಯಿಸಿಕೊಂಡು ಬರುತ್ತಿರುವ ಕುರಿಗಾಹಿಗಳ ಜೀವನಾಧಾರವಾಗಿದ್ದ ಕುರಿಗಳು ಇಂದು ದುರಂತವಾಗಿ ಅಂತ್ಯವಾಗಿರುವುದು ದುಃಖದ ಸಂಗತಿ. ಈ ಸಂಬಂಧ ಶುಕ್ರವಾರ ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಪಶುಸಂಗೋಪನಾ ಸಚಿವರ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಮಾತನಾಡಿ ಕುರಿಗಾಹಿಗಳಿಗೆ ಧೈರ್ಯ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.