ಜಾವಗಲ್: ಕುರಿಗಳ ಮೈ ತೊಳೆಯಲು ಗ್ರಾಮದ ದೊಡ್ಡ ಕೆರೆಗೆ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಬುಧವಾರ ಮೃತಪಟ್ಟಿದ್ದಾರೆ.

ಜಾವಗಲ್ ಗ್ರಾಮದ ಜನತಾ ಸೈಟ್ ಬಡಾವಣೆಯ ನಿವಾಸಿ ಬೇಬಿಜಾನ್ ಹಾಗೂ ಮೊಹಮ್ಮದ್ ಮುನೀರ್ ದಂಪತಿಯ ಇಬ್ಬರು ಪುತ್ರರಾದ ಇಮ್ರಾನ್ (15) ಹಾಗೂ ಯಾಸಿನ್(13) ಮೃತಪಟ್ಟ ಬಾಲಕರು.

ಶಾಲೆಗೆ ರಜೆ ಇದ್ದಿದ್ದರಿಂದ ಈ ಇಬ್ಬರು ಬಾಲಕರು ಕುರಿ ಮೇಯಿಸಿಕೊಂಡು ಹಾಗೂ ಕುರಿಗಳ ಮೈತೊಳೆದುಕೊಂಡು ಬರುವುದಾಗಿ ಮನೆಯಲ್ಲಿ ತಿಳಿಸಿ ಬುಧವಾರ ಮಧ್ಯಾಹ್ನ 3:30 ಸಮಯದಲ್ಲಿ ಗ್ರಾಮದ ದೊಡ್ಡ ಕೆರೆಗೆ ಹೋಗಿದ್ದು, ಕುರಿಗಳ ಮೈತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಸ್ವಲ್ಪ ದೂರದಲ್ಲಿದ್ದ ಇಬ್ರಾಹಿಂ ಎಂಬುವರು ಬಾಲಕರಿಬ್ಬರ ಮೃತದೇಹಗಳು ಕೆರೆಯಲ್ಲಿದ್ದದ್ದನ್ನು ನೋಡಿ, ಶವಗಳನ್ನು ನೀರಿನಿಂದ ಹೊರ ತಂದಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಜಾವಗಲ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಪುನೀತ್ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಸ್ಥಳ ಮಹಜರ ನಡೆಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-36-183988573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.