ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವೇನಹಳ್ಳಿ ಕೆರೆಗೆ ಅಭಿವೃದ್ಧಿ ಭಾಗ್ಯ

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸ್ಯಾಂಕಿ ಟ್ಯಾಂಕ್‌ ಮಾದರಿಯಲ್ಲಿ ನಿರ್ಮಾಣ
Last Updated 19 ಮಾರ್ಚ್ 2022, 15:39 IST
ಅಕ್ಷರ ಗಾತ್ರ

ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರವೂ (ಹುಡಾ) ₹3.33ಕೋಟಿ ವೆಚ್ಚದಲ್ಲಿ ನಗರದ ಜವೇನಹಳ್ಳಿ ಕೆರೆಯನ್ನು ಬೆಂಗಳೂರಿನ ಸ್ಯಾಂಕಿಟ್ಯಾಂಕ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸುತ್ತಿದೆ.

ಜವನೇಹಳ್ಳಿ ಕೆರೆ 12,653 ಚದರ ಮೀಟರ್‌ ವಿಸ್ತೀರ್ಣ, 400 ಮೀಟರ್‌ ಉದ್ದದಏರಿ ಹೊಂದಿದೆ. 0.20 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿರುವ ಈ ಸಣ್ಣಕೆರೆ ಭರ್ತಿಯಾದ ಬಳಿಕ ಹುಣಸಿನಕೆರೆಗೆ ನೀರು ಹರಿಯುವಂತೆ ಸ್ವಾಭಾವಿಕ ವ್ಯವಸ್ಥೆರೂಪುಗೊಂಡಿತ್ತು.

ದಿನ ಕಳೆದಂತೆ ಜನರು ಕೆರೆಗೆ ಕಟ್ಟಡ ತ್ಯಾಜ್ಯ, ಕಸ ಸುರಿಯಲು ಆರಂಭಿಸಿದರು. ಅಶುಚಿತ್ವದಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದರು.ಹಸಿರುಭೂಮಿ ಪ್ರತಿಷ್ಠಾನದ ಶ್ರಮದಾನದ ನಂತರ ಕೆರೆ ತನ್ನ ಮೂಲ ಸ್ವರೂಪ ಪಡೆದುಕೊಂಡಿತ್ತು. ಈಗ ಕೆರೆಗೆ ಹೊಸ ರೂಪ ನೀಡಲು ಹುಡಾನಿರ್ಧರಿಸಿದೆ.

ಕೆರೆ ಅಭಿವೃದ್ಧಿ ಯೋಜನೆಗಾಗಿ ಹುಡಾ ಖಾಸಗಿ ಏಜೆನ್ಸಿ ಹಾಗೂ ಸಣ್ಣ ನೀರಾವರಿಇಲಾಖೆ ಮೂಲಕ ಅಧ್ಯಯನ ವರದಿ ಪಡೆದು ವಿಸ್ತೃತ ಯೋಜನಾ ವರದಿಸಿದ್ಧಪಡಿಸಿದೆ. ಕೆರೆಗೆ ಹರಿದು ಬರುವ ನೀರಿನ ಪ್ರಮಾಣ, ಸಂಗ್ರಹ ಸಾಮರ್ಥ್ಯ, ಮಣ್ಣಿನ ಗುಣ, ಹೊರ ಹರಿವಿನ ಸರಪಳಿಯನ್ನು ಅಧ್ಯಯನ ಮಾಡಲಾಗಿದೆ.

1995ರಿಂದ 2020ರವರೆಗಿನ 25 ವರ್ಷಗಳ ವಾರ್ಷಿಕ ಮಳೆದಾಖಲೆ ಪರಿಶೀಲಿಸಲಾಗಿದ್ದು, ಕೆರೆ ಜಲಾನಯನ ಪ್ರದೇಶದಲ್ಲಿ ವಾರ್ಷಿಕಸರಾಸರಿ 954.111 ಮಿ.ಮೀ ಮಳೆ ಸುರಿಯುತ್ತದೆ. ಕೆರೆಯ ನೀರಿನಸಂಗ್ರಹ ಸಾಮರ್ಥ್ಯ 30 ದಶಲಕ್ಷ ಲೀಟರ್‌ಗಳಾಗಿದ್ದು, ವಾರ್ಷಿಕ190.80 ದಶಲಕ್ಷ ಲೀಟರ್‌ ಒಳ ಹರಿವು ಹೊಂದಿದೆ. ಕೆರೆ ಅಭಿವೃದ್ಧಿ ಯೋಜನೆ ರೂಪಿಸುವ ಮುನ್ನ ಈ ಎಲ್ಲ ಅಂಶಗಳನ್ನು ಪರಿಗಣಿಸಲಾಗಿದೆ.

ಕೆರೆ ಸುತ್ತಲ್ಲೂ ಚೈನ್‌ ಲಿಂಕ್‌ ಬೇಲಿ ಅಳವಡಿಕೆ, ಏರಿ ನಿರ್ಮಾಣ, ಕಲ್ಲಿನ ಒಡ್ಡು ನಿರ್ಮಾಣ, ಕೆರೆ ದಂಡೆ ಸುಂದರಗೊಳಿಸುವುದು, ಸುತ್ತಲಿನರಸ್ತೆಗಳ ಅಭಿವೃದ್ಧಿ, ನಡಿಗೆ ಪಥ ನಿರ್ಮಾಣ, ಚರಂಡಿ, ಹೊರ ಹರಿವಿನ ಕಾಲುವೆಗಳ, ಇ–ಟಾಯ್ಲೆಟ್‌ಗಳ ನಿರ್ಮಾಣವು ಈ ಯೋಜನೆಯಲ್ಲಿ ಒಳಗೊಂಡಿದೆ.

ಕೆರೆ ಪಕ್ಕದಲ್ಲಿರುವ ಸಂಗಮೇಶ್ವರ ಬಡಾವಣೆಯ ಉದ್ಯಾನಕ್ಕೆ ಮಕ್ಕಳ ಆಟಿಕೆ,ವ್ಯಾಯಾಮ ಪರಿಕರ ಅಳವಡಿಸಲಾಗುತ್ತಿದೆ. ಸುತ್ತಲೂ ಗಿಡಗಳನ್ನು ನೆಟ್ಟುತಂಪಾದ ವಾತಾವರಣ ನಿರ್ಮಿಸಲಾಗುತ್ತದೆ. ಇಂಟರ್‌ಲಾಕ್‌ ವಾಕಿಂಗ್ ಪಾತ್, ಕಲ್ಲು ಬೆಂಚು, ನೀರಿನ ಕಾರಂಜಿಯನ್ನು ನಿರ್ಮಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT