ಹೊಳೆನರಸೀಪುರ: ಶುಕ್ರವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯ ರಾಜ್ಯೋತ್ಸವ ಕಾರ್ಯಕ್ರಮ ವೇದಿಕೆ ಮದುವೆ ಮನೆಯಂತೆ ನಳನಳಿಸುತ್ತಿತ್ತು. ವೈದ್ಯರು, ದಾದಿಯರು, ಸಿಬ್ಬಂದಿ ತಮ್ಮ ನಿತ್ಯದ ಕೆಲಸದ ನಂತರ ಬಣ್ಣಬಣ್ಣದ ವೇಷ ತೊಟ್ಟು ಓಡಾಡುತ್ತಾ ಮದುವೆಗೆ ಬಂದವರಂತೆ ‘ಹೊನಪೋತ್ಸವ’ದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಡಾ. ಸೆಲ್ವಕುಮಾರ್ ಪಠಾಣ್ ವೇಷದಲ್ಲಿ, ಡಾ. ಸತ್ಯಪ್ರಕಾಶ್ ಆಕಸ್ಮಿಕ ಚಿತ್ರದಲ್ಲಿನ ಡಾ. ರಾಜಕುಮಾರ್ ಧಿರಿಸಿನಲ್ಲಿ, ಡಾ. ಅಶ್ವಥಿ ಭರತನಾಟ್ಯ ಕಲಾವಿದೆ ವೇಷತೊಟ್ಟು ಗಮನ ಸೆಳೆದರು. ವೈದ್ಯರು, ದಾದಿಯರು, ಸಿಬ್ಬಂದಿ, ನೃತ್ಯ, ನಾಟಕ, ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು. ವೈದ್ಯರೆಲ್ಲರು ರೇಷ್ಮೆ ಪಂಚೆ, ಅಂಗಿ, ಶಲ್ಯಗಳನ್ನು ತೊಟ್ಟು ಗಮನ ಸೆಳೆದರೆ, ಮಹಿಳಾ ವೈದ್ಯರು ಬಣ್ಣ ಬಣ್ಣದ ರೇಷ್ಮೆ ಸೀರೆ ತೊಟ್ಟಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯಾಧಿಕಾರಿ ಧನ್ಶೇಖರ್, ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಲು ಹೋರಾಡಬೇಕಾದ ಅನಿವಾರ್ಯತೆ ಇರುವ ಈ ದಿನಗಳಲ್ಲಿ ನಾವು ನವೆಂಬರ್ ತಿಂಗಳಲ್ಲಿ ಮಾತ್ರ ರಾಜ್ಯೋತ್ಸವ ಆಚರಿಸಿದರೆ ಸಾಲದು. ನಮ್ಮ ಮನೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ಮಮ್ಮಿ, ಡ್ಯಾಡಿ, ಪಪ್ಪ, ಆಂಟಿ, ಅಂಕಲ್ರನ್ನು ದೂರ ಇಟ್ಟು ಅಪ್ಪ,ಅಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಮಾವ ಅವರನ್ನು ಕರೆದುಕೊಳ್ಳಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ರವೀಂದ್ರ ಕುಮಾರ್, ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಲು ಅನೇಕರು ಹೋರಾಡಿದರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಆಯಿತು. ಕನ್ನಡ, ಈ ನಾಡಿನ ಭಾಷೆ ಆಯಿತು ಎಂದು ವಿವರಿಸಿದರು.

ಶುಶ್ರೂಷಕಿ ರೂಪ ಸ್ವಾಗತ ನೃತ್ಯಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಮನೋವೈದ್ಯ ಡಾ. ರಘು ನಾವಾಡುವ ನುಡಿಯೇ ಕನ್ನಡ ನುಡಿ, ಗಂಧದ ಗುಡಿ ಗೀತೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವೈದ್ಯರಾದ ಡಾ. ಕುಸುಮಾ, ಡಾ. ಶ್ರೇಯಾ, ಡಾ. ಪ್ರತಿಭಾ, ಡಾ. ರೇಖಾ, ಡಾ.ಅಶ್ವಥಿ, ಡಾ. ಭವ್ಯಾ, ಡಾ.ವಿನಯ್, ಡಾ. ದಿನೇಶ್, ಡಾ.ನಾಗೇಂದ್ರ, ಡಾ. ಲೋಕೇಶ್ ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ’ ಚಿತ್ರಗೀತೆಗೆ ನೃತ್ಯಮಾಡಿ ರಂಜಿಸಿದರು.

ಡಾ.ಬಿ.ಸಿ. ರಾಯ್ ಪ್ರಶಸ್ತಿ ಪಡೆದ ಡಾ. ಮುರಳಿಧರ್, ಡಾ. ವಿಜಯಕುಮಾರ್ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಬೇರೆ ಊರಿಗೆ ವರ್ಗವಾದ ಡಾ. ಲಕ್ಷ್ಮೀಕಾಂತ್ ಆಗಮಿಸುತ್ತಿದ್ದಂತೆ ಸಭೆಯಲ್ಲಿದ್ದ ವೈದ್ಯರು, ಸಿಬ್ಬಂದಿ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆದು ಗೌರವ ಸೂಚಿಸಿದರು. ಹೊಸದಾಗಿ ಸರ್ಕಾರಿ ಆಸ್ಪತ್ರೆಗೆ ವರ್ಗವಾಗಿ ಬಂದಿರುವ ಸಿಬ್ಬಂದಿಗಯನ್ನು ಹಾಗೂ ವರ್ಗವಾದ ಸಿಬ್ಬಂದಿಯನ್ನು ಗೌರವಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್, ಪುಟ್ಟೇಗೌಡ, ಡಾ. ಅಜಯ್, ಡಾ, ಸತೀಶ್, ಶುಶ್ರೂಷಕ ಅಧಿಕಾರಿ ಮೀನಾಕ್ಷಿ ಭಾಗವಹಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.