ಶುಕ್ರವಾರ, ನವೆಂಬರ್ 22, 2019
25 °C

ಕಸಾಯಿಖಾನೆಗೆ ಸಾಗಿಸುತ್ತಿದ್ದ ರಾಸುಗಳ ವಶ

Published:
Updated:

ಹಾಸನ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಂಟು ರಾಸುಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ರಕ್ಷಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದರು.

ನಗರದ ಸಂತೇಪೇಟೆ ವೃತ್ತದಿಂದ ಗೂಡ್ಸ್‌ ವಾಹನದಲ್ಲಿ ಸಾಗಿಸುತ್ತಿರುವುದನ್ನು ತಡೆದು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.

ವಾಹನ ಚಾಲಕ ಜಾಕೀರ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ನಾಲ್ಕೈದು ಜನರು ಸ್ಥಳದಿಂದ ಪರಾರಿಯಾಗಿದ್ದಾರೆ. ನಾಲ್ಕು ವಾಹನಗಳಲ್ಲಿ ರಾಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಬೆನ್ನತ್ತಿ ಒಂದು ಗಾಡಿ ಹಿಡಿಯುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಬಸ್, ಬೈಕ್ ಡಿಕ್ಕಿ ವ್ಯಕ್ತಿ ಸಾವು

ಹಾಸನ : ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಳೆನರಸೀಪುರ ಹಿರೆಬೆಳಗೂಲಿ ಕ್ರಾಸ್ ಬಳಿ ನಡೆದಿದೆ.
ಇಲ್ಲಿನ ಸಿಂಗಾಪುರ ಪಾಳ್ಯ ಗ್ರಾಮದ ನಿವಾಸಿ ನಾಗೇಂದ್ರ (33) ಹಳೂರು ಮಾರಮ್ಮ ದೇವಾಲಯಕ್ಕೆ ಹಾಸನ –ಮೈಸೂರು ರಸ್ತೆ ಹಿರೆ ಬೆಳಗೂಲಿ ಕ್ರಾಸ್ ನಿಂದ ಹೋಗುವಾಗ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು.

 

ಪ್ರತಿಕ್ರಿಯಿಸಿ (+)