ಹಾಸನ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ-2’ ತಂತ್ರಾಂಶದಡಿ ಜಾರಿಗೆ ತಂದಿರುವ ಪೇಪರ್ಲೆಸ್ ನೋಂದಣಿ ವ್ಯವಸ್ಥೆಗೆ ರಾಜ್ಯದ ಅಧಿಕೃತ ಪತ್ರ ಬರಹಗಾರರ ಒಕ್ಕೂಟದ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಏ.30ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಈ ಆನ್ಲೈನ್ ನೋಂದಣಿ ವ್ಯವಸ್ಥೆಯಿಂದ ಸಾರ್ವಜನಿಕರು, ವಿಶೇಷವಾಗಿ ರೈತರು ಹಾಗೂ ಕಂಪ್ಯೂಟರ್ ಜ್ಞಾನವಿಲ್ಲದವರು ತೊಂದರೆ ಎದುರಿಸುತ್ತಿದ್ದಾರೆ ಎಂದು ದೂರಿದರು.

ಕಾಗದ ರಹಿತ ವ್ಯವಸ್ಥೆಯಲ್ಲಿ ಆಸ್ತಿ ದಾಖಲೆಗಳಿಗೆ ಭೌತಿಕ ಪ್ರತಿಗಳು ದೊರೆಯುವುದಿಲ್ಲ. (ಡಿಜಿಲಾಕರ್) ಡಿಜಿಟಲ್ ಲಾಕರ್ನಲ್ಲಿ ಮಾತ್ರ ದಾಖಲೆ ಉಳಿಯುವುದರಿಂದ ಭವಿಷ್ಯದಲ್ಲಿ ವಾರಸುದಾರರಿಗೆ ಮಾಹಿತಿ ಸಿಗದ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆನ್ಲೈನ್ ಮೂಲಕವೇ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಪಾವತಿಸಬೇಕು. ಯಾವುದೇ ಕಾರಣಕ್ಕೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಹಣ ಮರಳಿ ಪಡೆಯಲು ಅವಕಾಶ ಇಲ್ಲ. ಇದು ಸಾರ್ವಜನಿಕರಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.

ಭೌತಿಕ ಸಹಿ ಬದಲು ಇ-ಸಹಿ ಮೂಲಕ ವ್ಯವಹಾರ ನಡೆಯುವುದರಿಂದ ಹಿರಿಯ ನಾಗರಿಕರು ಹಾಗೂ ಅನಕ್ಷರಸ್ಥರು ಮೋಸಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಸಾಕ್ಷಿದಾರರ ಒಟಿಪಿ ಪ್ರಕ್ರಿಯೆ, ಹಾಜರಾತಿ ಸಮಸ್ಯೆಯಿಂದ ನೋಂದಣಿ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಮೊಬೈಲ್ ಹ್ಯಾಕಿಂಗ್, ಒಟಿಪಿ ಮೋಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ನೋಂದಣಿ ವ್ಯವಸ್ಥೆಯ ಭದ್ರತೆ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ವ್ಯವಸ್ಥೆ ಭೂಮಾಫಿಯಾ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್ ಸಾಲ ಪಡೆಯಲು ಭೌತಿಕ ದಾಖಲೆ ಅಗತ್ಯವಿರುವುದರಿಂದ ಕಾಗದ ರಹಿತ ವ್ಯವಸ್ಥೆ ಅನಾನುಕೂಲವಾಗಿದೆ. ವಿಲ್ ಪತ್ರಗಳನ್ನು ಗುಪ್ತವಾಗಿ ಇಡುವ ವ್ಯವಸ್ಥೆಯೂ ಇಲ್ಲ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿ ಯಲ್ಲಿ ಜಯರಾಮ್, ಸತೀಶ್, ತುಳಸಿದಾಸ್, ಸತ್ಯನಾರಾಯಣ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-36-881474989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.