ಕೊಣನೂರು: ಕೊಣನೂರು - ಕಟ್ಟೇಪುರ ನಡುವೆ ಕಾವೇರಿ ನದಿಗೆ ಶಾಶ್ವತ ಸೇತುವೆ ನಿರ್ಮಾಣ ಸಂಬಂಧ ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಶಾಸಕ ಎ.ಮಂಜು ಬುಧವಾರ ಸ್ಥಳ ಪರಿಶೀಲನೆ ನಡೆಸಿ ಚರ್ಚಿಸಿದರು.

ಕೊಣನೂರು-ಕಟ್ಟೇಪುರ ನಡುವೆ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತ ಸೇತುವೆ ನಿಮರ್ಾಣಕ್ಕೆ ಶೀಘ್ರದಲ್ಲಿ ದಿನಾಂಕ ನಿಗದಿಪಡಿಸಿ ₹45.21 ಕೋಟಿ ವೆಚ್ಚದ ಸೇತುವೆ ಮತ್ತು ಸಂಪರ್ಕ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಈ ಸಂಪರ್ಕ ಸೇತುವೆಯು ಹಾಸನ, ಮೈಸೂರು ಜಿಲ್ಲೆಗಳ ಸುಮಾರು 40 ಹಳ್ಳಿಗಳಿಗೆ ಕೇವಲ 2 ಕಿಮೀ ಅಂತರದಲ್ಲಿ ನೇರ ಸಂಪರ್ಕ ದೊರಕುವುದು. ಆಸ್ಪತ್ರೆ, ಮಾರುಕಟ್ಟೆ ವ್ಯವಹಾರ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸುಲಭ ಸಂಚಾರ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರದಿಂದ ಅನುದಾನ ಹಾಕಿಸಿಕೊಂಡು ಬಂದಿದ್ದು ಎರಡೂ ಭಾಗದ ಸಾರ್ವಜನಿಕರು ಸಹಕರಿಸಿದರೆ ಕಾಮಗಾರಿ ಶೀಘ್ರ ಮುಗಿದು ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ಮಂಜು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಶ್ಮಿ ಮಾತನಾಡಿ, ಈಗಾಗಲೇ ಯೋಜನಾ ವರದಿ, ಅಂದಾಜು ವೆಚ್ಚ ಸಿದ್ದಗೊಂಡಿದ್ದು ಅನುಮೋದನೆ ಸಿಕ್ಕಿದ ಕೂಡಲೇ ಇನ್ನೊಂದು ತಿಂಗಳ ಒಳಗೆ ಕಾಮಗಾರಿ ಆರಂಭಿಸಲಾಗುವುದು. ಕೊಣನೂರು ರಾಜ್ಯ ಹೆದ್ದಾರಿಯಿಂದ ಕಟ್ಟೇಪುರದವರೆಗೆ 7 ಮೀ ಅಗಲದ ರಸ್ತೆ ಹಾಗೂ ರಸ್ತೆಯ ಪಕ್ಕದಲ್ಲಿ ಚರಂಡಿ, ಪಾದಚಾರಿ ಮಾರ್ಗ ನಿಮರ್ಿಸಲಾಗುವುದು. ಸರ್ಕಾರದ ಕರಾಬು ರಸ್ತೆಯಲ್ಲೇ ರಸ್ತೆ ನಿರ್ಮಾಣ ಮಾಡಲಾಗುವುದು. ರಸ್ತೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಒತ್ತುವರಿ ಆಗಿದ್ದರೆ ಬಿಡಿಸಿಕೊಳ್ಳಲಾಗುವುದು ಹಾಗೂ ಹೆಚ್ಚು ಜಾಗ ಬೇಕಾದಲ್ಲಿ ಅದನ್ನು ಖರೀದಿಸಲಾಗವುದು ಎಂದರು.

ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೆ.ಆರ್. ಹೊಯ್ಸಳ ಮಾತನಾಡಿ, ಕೊಣನೂರು ಹಾಗೂ ಕಟ್ಟೇಪುರ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಹಲವಾರು ವರ್ಷಗಳ ಕನಸಾಗಿದ್ದ ಕಾವೇರಿ ನದಿಗೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಾಣದ ಕನಸು ಇದೀಗ ನನಸಾಗಿಸಲು ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಸಚಿವರಲ್ಲಿ ಒತ್ತಾಯ ಮಾಡಿ, ಅನುದಾನ ತರಲು ಶ್ರಮವಹಿಸಿದ್ದಾರೆ. ಅವರಿಗೆ ಕಟ್ಟೇಪುರ ಹಾಗೂ ಕೊಣನೂರು ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರಾಕೇಶ್, ಪುನೀತ್, ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ಮುಖಂಡ ಇಮ್ರಾನ್ ಮೊಕ್ತಾರ್, ಎಸ್. ನಾಗರಾಜ್, ಕೃಷ್ಣಪ್ಪ, ಮುರಳೀಧರ್, ರವಿಕುಮಾರ್, ಮೋಹನ್, ಹೊಯ್ಸಳ, ಶ್ರೀನಿವಾಸ್, ಕೃಷ್ಣೇಗೌಡ, ಸಂದೀಪ, ಕಾಳೇಗೌಡ್ರು, ಪ್ರಸನ್ನ, ಜಗದೀಶ್, ರವಿ, ಮಂಜು, ದೊರೆ, ಮಂಜೇಗೌಡ, ಚಂದ್ರಯ್ಯ, ಸೋಮಣ್ಣ, ಪ್ರದೀಪ್, ಗುರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-36-699175851

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.