ಶನಿವಾರ, ಜನವರಿ 28, 2023
20 °C
ಮನೆ ಮನೆ ಕವಿಗೋಷ್ಠಿಯಲ್ಲಿ ಚಲಂ ಹಾಡ್ಲಹಳ್ಳಿ

ಪ್ರಬಂಧ ಪ್ರಕಾರದ ನಿರ್ಲಕ್ಷ್ಯ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸಾಹಿತ್ಯ ಕ್ಷೇತ್ರದಲ್ಲಿ ಪ್ರಬಂಧ ಪ್ರಕಾರವನ್ನು ಕಡೆಗಣಿಲಾಗಿದೆ. ಆದರೂ ಪ್ರಬಂಧಗಳು ತನ್ನದೇ ಆದ ವ್ಯಾಪ್ತಿಯೊಳಗೆ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿವೆ ಎಂದು ಸಾಹಿತಿ, ಪತ್ರಕರ್ತ ಚಲಂ ಹಾಡ್ಲಹಳ್ಳಿ ತಿಳಿಸಿದರು.

ಮನೆಮನೆ ಕವಿಗೋಷ್ಠಿಯ 300 ನೇ ತಿಂಗಳ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಸರ್ಕಾರಿ ನೌಕರ ರಾಮಕೃಷ್ಣ ಅವರ ಪ್ರಾಯೋಜಕತ್ವದಲ್ಲಿ ನಗರದ ಶಂಕರಿಪುರಂ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾ ರಮೇಶ್ ಅವರ ‘ಟೀ ಬ್ರೇಕ್’ ಪ್ರಬಂಧ ಸಂಕಲನ ಪರಿಚಯಿಸಿ ಅವರು ಮಾತನಾಡಿದರು.

ಗಂಭೀರ ಸಾಹಿತ್ಯ ಕ್ಷೇತ್ರ ಪ್ರಬಂಧ ಪ್ರಕಾರಕ್ಕೆ ಮಾನ್ಯತೆ ನೀಡದಿದ್ದರೂ, ನಿತ್ಯದ ಓದುಗರು ಈ ಪ್ರಕಾರಕ್ಕೆ ಗಂಭೀರ ಸಾಹಿತ್ಯಕ್ಕಿಂತ ಹೆಚ್ಚಿನ ಸ್ಥಾನವನ್ನು ನೀಡಿದ್ದಾರೆ ಎಂದ ಅವರು, ಈ ಕಾಲದ ಸಾಹಿತಿಗಳನ್ನು ಬಿಟ್ಟರೆ ಹಿರಿಯ ಎಲ್ಲ ಸಾಹಿತಿಗಳು ಪ್ರಬಂಧ ಹಾಗೂ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ ಎಂದರು.

ಸುಮಾ ರಮೇಶ್ ಅವರ ‘ಟೀ ಬ್ರೇಕ್’ ಪ್ರಬಂಧಗಳು ಬದುಕಿನ ಅನುಭವದ ಜೊತೆಗೆ ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಸಾಗುತ್ತವೆ. ಮನೆಯೊಳಗಿನಿಂದ ಪ್ರಪಂಚ ನೋಡುವ ಸುಮಾ ಅವರ ಕ್ರಮ, ಹೊರಗಿನಿಂದ ಮನೆಯನ್ನು ನೋಡುವ ಕ್ರಮಕ್ಕಿಂತ ಭಿನ್ನವಾಗಿರುವುದರಿಂದ ಆಪ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಸುಮಾ ರಮೇಶ್ ಮಾತನಾಡಿ, ‘ಓದುಗರ ಮೊಗದಲ್ಲಿ ನಗು ಹುಟ್ಟಿಸುವ ಕೆಲಸ ಸಾರ್ಥಕವಾದುದು. ಆ ನಿಟ್ಟಿನಲ್ಲಿ ಈ ಪ್ರಕಾರ ನನಗೆ ಸಮಾಧಾನ ನೀಡಿದೆ’ ಎಂದರು.

ಮನೆಮನೆ ಕವಿಗೋಷ್ಠಿಯ ಸಂಚಾಲಕಿ ಶಾಂತಾ ಅತ್ನಿ ಮಾತನಾಡಿದರು. ಸರೋಜಾ, ಎಚ್.ಕೆ. ಯಮುನಾವತಿ, ಖುಷಿ, ಯಶಸ್ವಿನಿ, ಲಕ್ಷ್ಮೀಶ ಜಿ.ಎ., ಸಾವಿತ್ರಮ್ಮ ಬಿ. ಗೌಡ, ಕುಮಾರ ಚಲವಾದಿ, ಚೂಡಾವಣೆ ಎಚ್.ಬಿ., ಶಿವಣ್ಣ ಮಡಬಲು, ಪದ್ಮಾಶರ್ಮ, ಡಾ.ಎಲ್. ತಿಮ್ಮೇಶ್, ವಾಣಿ ನಾಗೇಂದ್ರ, ಪ್ರತಿಭಾ ಬಿ.ಆರ್., ಭಾನುಮತಿ, ಮಲ್ಲೇಶ್ ಜಿ., ಕವನ ವಾಚಿಸಿದರು.

ನಾಯಂದರ, ಎಂ.ಡಿ. ಪರಮೇಶ್, ಸೀತಮ್ಮ ವಿವೇಕ್, ಅಭಿದಾ ಭಾನು, ಪ್ರಜ್ವಲ್ ಕೆ.ಆರ್., ಸುಚಿತ್ರಾ, ಮೀನಾಕ್ಷಿ, ಪಾಂಡುರಂಗ, ಷಣ್ಮುಖಯ್ಯ, ಹಿತ, ವಿವೇಕ, ಅರುಣ್, ಸೈಯದ್, ಎಚ್.ಪಿ. ಛಾಯಾದೇವಿ, ನಿಶಾಂತ್, ಲೀಲಾವತಿ, ಬಿ.ಎಂ. ಭಾರತಿ ಹಾದಿಗೆ, ಎಚ್‌.ಜಿ. ಉದಯ, ಬಿ.ಆರ್. ನರಸಿಂಹ, ರಕ್ಷಿತ್ ಕೌನ್ಸಿಲರ್, ಉಷಾ, ಲಲಿತಮ್ಮ, ಮಂಜುಳಾ ಕುಮಾರಸ್ವಾಮಿ, ನಿಶಾ, ಸುಬ್ರಹ್ಮಣ್ಯ, ಜಯಂತಿ ಚಂದ್ರಶೇಖರ್, ವಸುಮತಿ ಜೈನ್, ಪ್ರೇಮಾ ಪ್ರಶಾಂತ್, ಪ್ರಶಾಂತ್, ಪ್ರಜ್ಞಾಪಿಹರಿತ್ಸ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.