ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ

7
ಗ್ರಾಮ ಅಭಿವೃದ್ಧಿಗೆ ಹುಟ್ಟಿಕೊಂಡ ಗ್ರಾಮ್‌ ಸ್ವರಾಜ್‌ ಸಮಿತಿ

ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ

Published:
Updated:
Deccan Herald

ಪ್ರಜಾವಾಣಿ ವಾರ್ತೆ
ಹಾಸನ: ನಗರ ಸಮೀಪದ ಚಿಕ್ಕಹೊನ್ನೇನಹಳ್ಳಿ ಗ್ರಾಮ ಅಭಿವೃದ್ಧಿಗಾಗಿ ಹುಟ್ಟಿಕೊಂಡಿರುವ ಗ್ರಾಮ ಸ್ವರಾಜ್ ಸಮಿತಿಯು ಗುರುವಾರ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿತು.

ಜಿಲ್ಲೆಯ ಮೂರು ಕೆರೆ, 35 ಕಲ್ಯಾಣಿಗಳ ಸ್ವಚ್ಛತೆ ಹಾಗೂ 5 ಸಾವಿರ ಸಸಿ ನೆಡುವ ಮೂಲಕ ಕೆರೆಗಳ ಪುನರುಜ್ಜೀವನ ಕಾಯಕದಲ್ಲಿ ತೊಡಗಿರುವ ಹಸಿರು ಭೂಮಿ ಪ್ರತಿಷ್ಠಾನ ನೇತೃತ್ವದಲ್ಲಿ ರಚನೆಯಾಗಿರುವ ಗ್ರಾಮ ಸ್ವರಾಜ್ ಸಮಿತಿಯ ಅಧ್ಯಕ್ಷರಾಗಿ ಗ್ರಾಮದ ಪುಟ್ಟಸ್ವಾಮಿ ಒಂದು ವರ್ಷ ಕಾರ್ಯ ನಿರ್ವಹಿಸಲಿದ್ದಾರೆ. ಗ್ರಾಮದ ಯುವಕರು ಸಮಿತಿಯ ಪದಾಧಿಕಾರಿಗಳಾಗಿದ್ದು ಕೆರೆ ಪುನಶ್ಚೇತನ ಕಾಮಗಾರಿಗೆ ಅನುದಾನವೂ ದೊರೆತಿದೆ.

ಹರಳಹಳ್ಳಿ ಗ್ರಾಮ ಪಂಚಾಯಿತಿ ನಿಧಿಯಿಂದ ₹ 4 ಲಕ್ಷ, ವಿಜಯ ಶಿಕ್ಷಣ ಸಂಸ್ಥೆ ₹ 1 ಲಕ್ಷ , ಜನಪ್ರಿಯ ಆಸ್ಪತ್ರೆ ಅಧ್ಯಕ್ಷ ಡಾ. ಅಬ್ದುಲ್ ಬಷೀರ್ ₹ 25 ಸಾವಿರ ಹಾಗೂ ಮಲ್ನಾಡ್ ನರ್ಸಿಂಗ್ ಹೋಂನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ ₹ 10 ಸಾವಿರ ನೀಡಿದರು.

ಹರಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಸುಜಾತಾ, ಸರಸ್ವತಿ, ಲಕ್ಷ್ಮಿ, ಗೀತಾ, ವಿಜಯಕುಮಾರಿ, ಜಯಲಕ್ಷ್ಮಿ ಅವರು ₹ 4 ಲಕ್ಷ ನೀಡುವ ವಾಗ್ದಾನ ಮಾಡಿದರು.

ಹಿರಿಯ ಹೋರಾಟಗಾರ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ಗ್ರಾಮಗಳು ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ಗ್ರಾಮದ ಯುವಕರು ಕೆರೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಒಳ್ಳೆಯ ಕೆಲಸಕ್ಕೆ ನೆರವಾಗಲು ಅನೇಕರು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಗ್ರಾಮ ಸ್ವರಾಜ್ಯ ಹಣಕಾಸು ಸಮಿತಿ ಮುಖ್ಯಸ್ಥೆ ತಾರಾ ಸುಬ್ಬುಸ್ವಾಮಿ ಮಾತನಾಡಿ, ಚಿಕ್ಕಹೊನ್ನೇನಹಳ್ಳಿ ಕೆರೆ ಅಭಿವೃದ್ಧಿಗಾಗಿ ವಿಜಯ ಸ್ಕೂಲ್ ನಿಂದ ₹ 1 ಲಕ್ಷ ನೀಡಲಾಗುವುದು. ನಗರ ಸುತ್ತಲಿನ ಕೆರೆಕಟ್ಟೆಗಳು ಅಭಿವೃದ್ಧಿಯಾದರೆ ಅಂತರ್ಜಲ ವೃದ್ಧಿಯಾಗಿ ಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದು ಎಂದು ನುಡಿದರು.

ಸಾಮಾಜಿಕ ಕಾರ್ಯಕರ್ತ ಡಾ.ಗುರುರಾಜ್ ಹೆಬ್ಬಾರ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಡಾ. ಅಬ್ದುಲ್ ಬಷೀರ್, ಡಾ. ಹಾರೂನ್, ಪರಿಸರವಾದಿ ಎಚ್.ಪಿ.ಮೋಹನ್, ಪಾಷಾ, ಸುಜಾತಾ ನಾಗರಾಜ್, ರಂಗಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !