ಕೆರೆಗೆ ಕೊಳಚೆ ನೀರು ತಡೆಗಟ್ಟಿ

ಬುಧವಾರ, ಜೂನ್ 19, 2019
31 °C
ಹುಣಸಿನ ಕೆರೆಗೆ ನಿವೃತ್ತ ಎಂಜಿನಿಯರ್‌ಗಳ ಭೇಟಿ, ಪರಿಶೀಲನೆ

ಕೆರೆಗೆ ಕೊಳಚೆ ನೀರು ತಡೆಗಟ್ಟಿ

Published:
Updated:
Prajavani

ಹಾಸನ: ನಗರದ ಹುಣಸಿನಕೆರೆ ಅಭಿವೃದ್ಧಿ ಕುರಿತು ವಿಸ್ತ್ರೃತ ಯೋಜನೆ ರೂಪಿಸುವ ಸಲುವಾಗಿ ನಿವೃತ್ತ ಎಂಜಿನಿಯರ್‌ಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.

ನಗರ ನೀರು ಸರಬರಾಜು ಮಂಡಳಿಯ ಎಂಜಿನಿಯರ್‌ಗಳು, ಹಸಿರು ಭೂಮಿ ಪ್ರತಿಷ್ಠಾನ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬೆಂಗಳೂರು ಜಲ ಮಂಡಳಿಯ ನಿವೃತ್ತ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ವಿ.ಸಿ.ಕುಮಾರ್‌, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಎಚ್‌.ಎಂ.ರವೀಂದ್ರ ಅವರು ಹುಣಸಿನಕೆರೆಗೆ ಭೇಟಿ ನೀಡಿ, ಸ್ಥಳೀಯರು ಹಾಗೂ ಸಂಘ, ಸಂಸ್ಥೆಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದು, ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ಕುರಿತು ಹಲವು ಸಲಹೆ, ಸೂಚನೆ ನೀಡಿದರು.

ವಿ.ಸಿ ಕುಮಾರ್ ಮಾತನಾಡಿ, ನಗರದ ಕೊಳಚೆ ನೀರು ನೇರವಾಗಿ ಹುಣಸಿನ ಕೆರೆಗೆ ಬಂದು ಕಲುಷಿತಗೊಂಡಿದೆ. ಇದರಿಂದ ಸ್ಥಳೀಯರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದ್ದರಿಂದ ಮೊದಲು ಕೊಳಚೆ ನೀರು ಕೆರೆಗೆ ಬಾರದಂತೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದರು.

ಕೆರೆಯಲ್ಲಿರುವ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡುವ ಮೂಲಕ ಕೊಳಚೆ ನೀರು ಕೆರೆಗೆ ನೇರವಾಗಿ ಹರಿಯುವುದನ್ನು ತಡೆಯಬಹುದಾಗಿದೆ. ಅಲ್ಲದೆ ವಿಶ್ರಾಂತಿ ಗೃಹ ನಿರ್ಮಾಣ ಮಾಡಿ ಆ ಮೂಲಕ ಕೆರೆಗೆ ಆಗಮಿಸುವವರಿಗೆ ಮೂಲಭೂತ ಸೌಕರ್ಯ ಕಲ್ಪಿಸಬಹುದು. ಅಲ್ಲದೇ ಪಕ್ಷಿಗಳಿಗೆ ನೆರವಾಗುವ ನಿಟ್ಟಿನಲ್ಲಿ ದ್ವೀಪ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ, ಕೆರೆಯ ಸ್ವಚ್ಛತೆ, ಸೌಂದರ್ಯ ಅಭಿವೃದ್ಧಿಗೆ ಸ್ಥಳೀಯರ ಹೆಚ್ಚಿನ ಸಹಕಾರ ಅಗತ್ಯ ಎಂದು ತಿಳಿಸಿದರು.

ಕಲಾವಿದ ಬಿ.ಎಸ್ ದೇಸಾಯಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೆರೆಯಿಂದ ಈ ಹಿಂದೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು, ಅಲ್ಲದೆ ಹಿಮಾಲಯ ಪಕ್ಷಿ ಸೇರಿದಂತೆ ಸುಮಾರು 130 ಜಾತಿಯ ಪಕ್ಷಿಗಳು ಇಲ್ಲಿಗೆ ಬಂದು ಸಂತಾನೋತ್ಪತ್ತಿ ಮಾಡಿ ಹೋಗುತ್ತಿದ್ದವು. ಆದರೆ, ಈಗ 213 ಎಕರೆ ವಿಸ್ತೀರ್ಣದ ಈ ಕೆರೆಗೆ ಹಾನಿಕಾರಕ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಜೊತೆಗೆ ಒತ್ತುವರಿಗೂ ಒಳಗಾಗಿದೆ. ಕೆರೆಯ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹಸಿರು ಭೂಮಿ ಪ್ರತಿಷ್ಠಾನದ ಸುಬ್ಬಸ್ವಾಮಿ, ಬಾಳುಗೋಪಾಲ್‌, ಸಂಗಮ್‌, ಮಂಜುನಾಥ್‌ ಮೋರೆ, ನಗರ ನೀರು ಸರಬರಾಜು ಇಲಾಖೆಯ ಜಗದೀಶ್ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !