ಕೊಣನೂರು: ಬಹು ದಿನಗಳ ನಿರೀಕ್ಷೆಯ ಬಸ್ ನಿಲ್ದಾಣದ ಮೂಲಸೌಕರ್ಯ ಕಾಮಗಾರಿಗೆ ಇಂದು ಚಾಲನೆ ನೀಡುತ್ತಿದ್ದೇನೆ ಎಂದು ಶಾಸಕ ಎ.ಮಂಜು ತಿಳಿಸಿದರು.

ರಾಮನಾಥಪುರ ಹೋಬಳಿಯ ಕೇರಳಾಪುರದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ₹75 ಲಕ್ಷ ವೆಚ್ಚದ ಕಾಂಪೌಂಡ್ ನಿರ್ಮಾಣ ಮತ್ತು ಕೇರಳಾಪುರ-ಬೂದನೂರು- ಹೊಳೆನರಸೀಪುರ ರಸ್ತೆಯ ವಿವಿಧ ಭಾಗಗಳ ಅಭಿವೃದ್ಧಿ ₹2 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇಲ್ಲಿನ ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸುವುದು ಬಹು ಬೇಡಿಕೆಯ ವಿಷಯವಾಗಿತ್ತು. ಮೊದಲಿಗೆ ಶಾಸಕರ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದ್ದು, ನಂತರ ನಿಲ್ದಾಣದ ಒಳಭಾಗಕ್ಕೆ ಸಿಮೆಂಟ್ ಹಾಕಿಸುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ. ಕಾಂಪೌಂಡ್ ನಿರ್ಮಿಸುವ ಮೊದಲು ನಿಲ್ದಾಣಕ್ಕೆ ಸೇರಿದ ಸಂಪೂರ್ಣ ಜಾಗವನ್ನು ಅಳತೆ ಮಾಡಿಸಿ ನಂತರ ಕಾಂಪೌಂಡ್ ನಿರ್ಮಾಣ ಕೆಲಸವನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇರಳಾಪುರ-ಬೂದನೂರು- ಹೊಳೆನರಸೀಪುರ ರಸ್ತೆಯು ಅಲ್ಲಲ್ಲಿ ಹೆಚ್ಚಿನ ಗುಂಡಿಗಳಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಗುಂಡಿಗಳಿರುವ ಜಾಗದಲ್ಲಿ ದುರಸ್ತಿಗೊಳಿಸಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಮಧುರನಹಳ್ಳಿಯಲ್ಲಿ ₹65 ಲಕ್ಷ ವೆಚ್ಚದಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆಗೆ ತುರ್ತಾಗಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡುಲಾಗುತ್ತಿದೆ ಎಂದರು.

ಆರೋಗ್ಯ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಭೂಮಿ ದಾನ ನೀಡಿದ ಎ.ಎಸ್.ಗೋವಿಂದಯ್ಯ ಮತ್ತಿತರರಿದ್ದರು. ಕೇರಳಾಪುರದಲ್ಲಿ ಮುಖಂಡ ಸಂತೋಷ್ಗೌಡ, ಕರೀಗೌಡ, ಮಂಜುನಾಥ್, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-36-105345207

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.