ಕೊಣನೂರು: ಶ್ರೀರಾಮನವಮಿಯ ಅಂಗವಾಗಿ ಇಲ್ಲಿನ ನದಿ ಕಾವೆರಿ ತೀರದಲ್ಲಿರುವ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.

ಇಲ್ಲಿನ ತೂಗು ಸೇತುವೆಯ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ ವಿಶೇಷ ದ್ರವ್ಯಗಳಿಂದ ಪೂಜೆ ಸಲ್ಲಿಸಲಾಯಿತು. ವಿವಿಧ ಪುಷ್ಪಗಳಿಂದ ಚಿತ್ತಾಕರ್ಷಕವಾಗಿ ಅಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು.

ಪೂಜೆಯ ನಂತರ ಭಕ್ತರಿಗೆ ದೇವಾಲಯ ಸಂರಕ್ಷಣಾ ಸಮಿತಿಯಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ನಾಗರಾಜು, ಉಪಾಧ್ಯಕ್ಷೆ ಪಾವನ ಸತೀಶ್, ಸದಸ್ಯೆ ಲಕ್ಷ್ಮಿ ಶ್ರೀನಿವಾಸ ಮತ್ತು ರಾಜು, ಮುಖಂಡ ಶ್ರೀನಿವಾಸಮೂರ್ತಿ, ಶ್ರೀಧರ್, ನಿವೃತ್ತ ಶಿಕ್ಷಕ ವಾಸುದೇವ್, ಶ್ರೀನಿವಾಸ, ದಶರಥ, ಮಂಜುನಾಥ, ಆನಂದ, ಶಿಕ್ಷಕಿ ಶೈಲಜಾ, ಅರ್ಚಕ ಶ್ರೀಧರ ಇದ್ದರು.

ಕೊಣನೂರು: ರಾಮನಾಥಪುರ ಹೋಬಳಿಯ ಬಸವಾಪಟ್ಟಣದಲ್ಲಿ ಶನಿವಾರ ಹನುಮ ಮೆರವಣಿಗೆ, ಓಕುಳಿ ಸಂಭ್ರಮ ಮನೆ ಮಾಡಿತ್ತು.

ಇಲ್ಲಿನ ಹೊಳೆ ಬೀದಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ರಾಮನವಮಿಯ ಪ್ರಯುಕ್ತ ಲಕ್ಷ್ಮಣ, ಸೀತಾ ಮಾತೆ ಮತ್ತು ಹನುಮ ಸಮೇತ ಮೆರವಣಿಗೆಯ ಜೊತೆಗೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗ್ರಾಮದ ಕುರುಹಿನ ಶೆಟ್ಟಿ ಸಮಾಜದ ಯುವಕರು, ಮಕ್ಕಳು ಮತ್ತು ಮಹಿಳೆಯರು ಬಣ್ಣ ಹಚ್ಚುತ್ತಾ ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.

ಇಲ್ಲಿನ ಪುರಾಣ ಪ್ರಸಿದ್ಧ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನ ಭಂಟ ಅಂಜನೇಯ ಸ್ವಾಮಿಗೆ ರಾಮನವಮಿ ಪ್ರಯಕ್ತ ವಿಶೇಷ ಪೂಜಾ ಕೈಂಕರ್ಯ ನಡೆದವು. ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-36-1073208469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.