ಕೊಣನೂರು: ಕೆಲ ಹೊತ್ತು ಸುರಿದ ಸಾಧಾರಣ ಮಳೆಯಿಂದಾಗಿ ವಾರದ ಸಂತೆ ವ್ಯಾಪಾರಕ್ಕೆ ಕಿರಿಕಿರಿಯಾದರೂ, ಹೊಗೆಸೊಪ್ಪು ನಾಟಿ ಮಾಡಿದ ರೈತರು ಹರ್ಷ ಚಿತ್ತರಾದರು.

ಗುರುವಾರ ಸಂಜೆ ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ಬಹುತೇಕ ಕಡೆಗಳಲ್ಲಿ ಸುರಿದ ಸಾಧಾರಣ ಮಳೆಯು ಕೆಲ ದಿನಗಳಿಂದ ನಾಟಿ ಮಾಡಿದ ಹೊಗೆಸೊಪ್ಪು ಸಸಿಗಳು, ಬೇರೂರಲು ಅನುಕೂಲವಾಯಿತು.ಬಿಸಿಲಿನ ಪ್ರಖರತೆಯಿಂದ ಮಂಕಾಗಿದ್ದ ಸಸಿಗಳಿಗೆ ಜೀವಕಳೆ ಬಂದಂತಾಯಿತು.ಕೆಲ ದಿನಗಳ ಹಿಂದೆಯೇ ನಾಟಿ ಮಾಡಿ ಗೊಬ್ಬರ ನೀಡಿದ್ದ ಸಸಿಗಳು ಗೊಬ್ಬರವನ್ನು ಹೀರಿಕೊಂಡು ಸದೃಢವಾಗಿ ಬೆಳೆಯಲು ಮಳೆ ಸಹಕಾರಿಯಾಗಿದೆ. ನೇಗಿಲು ಹೊಡೆದು ಸಸಿಗಳ ಬುಡಕ್ಕೆ ಮಣ್ಣು ಒದಗಿಸಲು ಉಪಯುಕ್ತವಾಯಿತು.ಕೊಣನೂರಿನಲ್ಲಿ ದಿಢೀರ್ ಸುರಿದ ಮಳೆಯಿಂದಾಗಿ ಸಂತೆ ವ್ಯಾಪಾರಕ್ಕೆ ಕಿರಿಕಿರಿ ಉಂಟು ಮಾಡಿತು. ತರಕಾರಿ ಮತ್ತಿತರ ಅಂಗಡಿಯವರು ಟಾರ್ಪಾಲ್ ಮುಚ್ಚಿಕೊಂಡು ತರಕಾರಿಗಳನ್ನು ಮಳೆಯ ನೀರಿನಿಂದ ರಕ್ಷಿಸಿಕೊಳ್ಳಬೇಕಾಯಿತು. ಆಕಾಶದಲ್ಲಿ ಆಕರ್ಷಕ ಕಾಮನಬಿಲ್ಲು ನಿರ್ಮಾಣವಾಗಿ ಕಣ್ಮನಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-36-1120352697

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.