ಕೊಣನೂರು (ಹಾಸನ ಜಿಲ್ಲೆ): ತಂಬಾಕು ದರ ಕುಸಿತ ಖಂಡಿಸಿ ಬೆಳೆಗಾರರು ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಗೆ ಶುಕ್ರವಾರ ಬೀಗ ಜಡಿದು, ತಂಬಾಕು ಬೇಲ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಮಾರುಕಟ್ಟೆಯ ಪ್ಲಾಟ್ಫಾರ್ಮ್ 63ರಲ್ಲಿ, ಗುಣಮಟ್ಟದ ತಂಬಾಕನ್ನು ಕೆ.ಜಿ.ಗೆ ₹260ರಂತೆ ಮತ್ತು ಕಡಿಮೆ ಗುಣಮಟ್ಟದ ತಂಬಾಕನ್ನು ₹150 ರಿಂದ ₹160ಕ್ಕೆ ಖರೀದಿಸಲಾಗುತ್ತಿತ್ತು.

‘ಇಷ್ಟು ಕಡಿಮೆ ದರಕ್ಕೆ ಹರಾಜು ಮಾಡಬಾರದು’ ಎಂದು ಆಕ್ಷೇಪಿಸಿ ವರ್ತಕರು, ಮಾರುಕಟ್ಟೆ ಹರಾಜು ಅಧೀಕ್ಷಕರೊಂದಿಗೆ ಬೆಳೆಗಾರರು ವಾಗ್ವಾದಕ್ಕಿಳಿದರು. ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದರು.

ಕೆಲಹೊತ್ತಿನ ಬಳಿಕ, ‘ಈಗಿನ ದರದಲ್ಲಿ ಮಾರಿದರೆ ಉತ್ಪಾದನಾ ವೆಚ್ಚವು ಸಿಗದು’ ಎಂದು ಪ್ರತಿಪಾದಿಸಿ ಮಾರುಕಟ್ಟೆ ಬಂದ್ ಮಾಡಿಸಿದರು. ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೇಲ್ಗಳಿಗೆ ಬೆಂಕಿ ಹಚ್ಚಿದರು.

‘ಕಂಪನಿಗಳು ಮನ ಬಂದ ಬೆಲೆಗೆ ತಂಬಾಕು ಖರೀದಿಸುತ್ತಿವೆ. ಬೆಲೆ ಕುಸಿತ ಕುರಿತು ಹಲವು ಬಾರಿ ಮನವಿ ಮಾಡಿದ್ದರೂ ತಂಬಾಕು ಮಂಡಳಿ ಬೆಂಬಲ ಬೆಲೆ ನೀಡದೇ ಮೋಸ ಮಾಡುತ್ತಿದೆ’ ಎಂದು ದೂರಿದರು.

ಹನ್ಯಾಳು, ಹಂಪಾಪುರ, ಬಸವಾಪಟ್ಟಣ, ರುದ್ರಪಟ್ಟಣ, ಮತ್ತಿಗೋಡು, ವಡ್ಡರಹಳ್ಳಿ, ಶಿರಧನಹಳ್ಳಿ ಮತ್ತು ಮೂಲೆಹೊಸಳ್ಳಿ ಸೇರಿ ಹಲವು ಗ್ರಾಮಗಳ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನೆ ನಡುವೆ, ಮಾರುಕಟ್ಟೆಯ ಪ್ಲಾಟ್ಫಾರ್ಮ್ 7 ರಲ್ಲಿ ಎಂದಿನಂತೆ ಹರಾಜು ಪ್ರಕ್ರಿಯೆ ನಡೆಯಿತು. ಪ್ರತಿ ಕೆ.ಜಿ. ಉತ್ಕಷ್ಟ ತಂಬಾಕಿಗೆ ₹301 ದರದಲ್ಲಿ 5 ಬೇಲ್ಗಳ ಹರಾಜು ನಡೆಯಿತು. ಉತ್ತಮ ದರ್ಜೆ ಬೇಲ್ಗಳಿಗೆ ಪ್ರತಿ ಕೆ.ಜಿ.ಗೆ ₹280 ಮತ್ತು ಕನಿಷ್ಠ ಬೆಲೆ ₹160 ರಂತೆ ವಹಿವಾಟು ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.