ಕೊಣನೂರು: ಪಟ್ಟಣದ ಆರ್ಯವೈಶ್ಯ ಸಮುದಾಯದ ವತಿಯಿಂದ ಕಳೆದ 5 ದಿನಗಳಿಂದ ನಡೆದ ವಾಸವಿ ಜಯಂತಿಯ ನಿಮಿತ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಮೊದಲ ದಿನ ದೇವಿಗೆ ಪುಷ್ಪಾರ್ಚನೆ, 2ನೇ ದಿನ ವಾಸವಿ ಪಾರಾಯಣ ಮಾಡಿದ ಮಹಿಳೆಯರಿಗೆ ಮಡಿಲಕ್ಕಿ ಹಾಕಲಾಯಿತು. 3ನೇ ದಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ, ಶನಿವಾರ ಸಂಜೆ ಬಿ.ವಿ.ಎಂ. ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಂತ್ಯಾಕ್ಷರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭಾನುವಾರ ಬೆಳಿಗ್ಗೆ 6 ಗಂಟೆಗೆ ದೇವಿಗೆ ಸುಪ್ರಭಾತ ಸೇವೆ, ಕಾವೇರಿ ನದಿಯಿಂದ ಗಂಗೆ ತಂದು, ಗೋಪೂಜೆ ನಡೆಸಿ, ಕಲಶದ ನೀರಿನಿಂದ ದೇವಿಯ ಮೂಲ ಮೂರ್ತಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಹೋಮಹವನಗಳು ಜರುಗಿ ಬಾಲ ಕನ್ನಿಕೆಯರಿಗೆ ಕನ್ನಿಕಾ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಅಡ್ಡಪಲ್ಲಕ್ಕಿ ಉತ್ಸವ ಪೂರೈಸಿ ಸಂಜೆ ದೇವಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ್ದ ಚಿನ್ನದ ರಥದಲ್ಲಿಟ್ಟು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಉತ್ಸವ ನಡೆಸಿ, ರಾತ್ರಿ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ 108 ಆರತಿಗಳನ್ನು ಅರ್ಪಿಸಲಾಯಿತು.

5 ದಿನಗಳ ಕಾರ್ಯಕ್ರಮಗಳಲ್ಲೂ ಮಹಿಳೆಯರು ದಿನಕ್ಕೊಂದರಂತೆ ನೀಲಿ, ಗುಲಾಬಿ, ಹಸಿರು ಸೀರೆಗಳನ್ನುಟ್ಟು ಮನ ಸೆಳೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-36-823406582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.