ಕೊಣನೂರು: ಸಂಗೀತೋತ್ಸವದಲ್ಲಿ ಕಲಾವಿದರ ಗಾನಸುಧೆಯು ಸಂಗೀತ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ರಾಮನಾಥಪುರ ಹೋಬಳಿಯ ಸಂಗೀತ ರುದ್ರಪಟ್ಟಣದಲ್ಲಿ ಜರುಗುತ್ತಿರುವ ಸಂಗೀತೋತ್ಸವವು ಕಳೆಗಟ್ಟುತ್ತಿದ್ದು ಅನುಭವಿ ಕಲಾವಿದರ ರಾಗ, ತಾಳ, ಗಾನ, ಲಯಗಳಿಂದ ಶ್ರೋತೃಗಳನ್ನು ಸೆಳೆಯುತ್ತಿದೆ.

ಬುಧವಾರ ಸಂಜೆ ಕಲಾವಿದೆಯರ ತಂಡ ನಡೆಸಿಕೊಟ್ಟ ಸಂಗೀತ ಕಚೇರಿಯು ಸಭಿಕರನ್ನು ಹಿಡಿದಿಟ್ಟಿತು. ಜಿ.ಯೋಗವಂದನ ವೀಣೆ, ಅದಿತಿಪ್ರಕಾಶ್ ಪಿಟೀಲು, ಸ್ಮಿತಾಶ್ರೀ ಕಿರಣ್ ಕೊಳಲು, ದೀಪಿಕಾ ಶ್ರೀನಿವಾಸನ್ ಮೃದಂಗ ಮತ್ತು ಭಾಗ್ಯ ಲಕ್ಷ್ಮೀಕೃಷ್ಣ ಮೋರ್ಚಿಂಗ್ ನುಡಿಸುತ್ತಾ ಭೈರವಿ ರಾಗದಲ್ಲಿ ವೀರಿಬೋಣಿ ಕೃತಿಯನ್ನು ಮೋಹನ ಕಲ್ಯಾಣಿ ರಾಗದಲ್ಲಿ, ಸಿದ್ಧಿ ವಿನಾಯಕಂ ಕೃತಿಯನ್ನು ಅರುಣ ರಾಗದಲ್ಲಿ, ಅನುಪಮ ಗುಣಾಂಬುಧಿ ಕೃತಿಯನ್ನು ಸಾಮರಾಗದಲ್ಲಿ, ಅನ್ನಪೂರ್ಣೀ ವಿಶಾಲಾಕ್ಷಿ ಕೃತಿಯನ್ನು, ಭಾಗ್ಯದ ಲಕ್ಷ್ಮೀ ಬಾರಮ್ಮ ಕೃತಿಯನ್ನು ಮಧ್ಯಮಾವತಿ ರಾಗದಲ್ಲಿ, ಭಜನಸೇಯರಾ ಕೃತಿಯನ್ನು ಧಮಾವತಿ ರಾಗದ ರೂಪಕ ತಾಳದಲ್ಲಿ ಮತ್ತು ಪಕ್ಕಲ ನೀಲಬಡಿ ಕೃತಿಯನ್ನು ಖರಹಪ್ರಿಯ ರಾಗದಲ್ಲಿ ತಾಳಬದ್ಧವಾಗಿ ಪ್ರಸ್ತುತಪಡಿಸಿದರು. ಹಿತ ಮಿತವಾಗಿ ಪಕ್ಕವಾದ್ಯಗಳನ್ನು ನುಡಿಸುತ್ತ ಕಛೇರಿಯ ಘನತೆಯನ್ನು ಹೆಚ್ಚಿಸಿದ ಕಲಾವಿದೆಯರು ಸಭಿಕರಿಂದ ಪ್ರಶಂಸೆಗೆ ಪಾತ್ರರಾದರು. ಗುರುವಾರ ಬೆಳಿಗ್ಗೆ ಪ್ರಾರಂಭವಾದ ಪಟ್ಟಾಭಿರಾಮ ಪಂಡಿತ್ ಟಿ.ಎಸ್. ಅವರ ಗಾಯನ ಮೋಡಿ ಮಾಡಿತು. 3 ಗಂಟೆಗಳ ಸಮಯ ಸಂಗೀತೋತ್ಸವದಲ್ಲಿ ಸೇರಿದ್ದ ಸಂಗೀತಪ್ರಿಯರನ್ನು ನಾದಲೋಕಕ್ಕೆ ಕೊಂಡೊಯ್ದಿತು. ಪಟ್ಟಾಭಿರಾಮರ ಸುಮಧುರ ಆಲಾಪನೆಯು ಸಭಿಕರ ಮನಗೆದ್ದು ತನ್ಮಯದಿಂದ ಕುಳಿತು ತಾಳ ಹಾಕುವಂತೆ ಮಾಡಿತು. ಆಕಾಶವಾಣಿ ಕಲಾವಿದರಾದ ಟಿ.ಕೆ ರಾಮಾನುಜಾಚಾರ್ಯಲು ಪಿಟೀಲು, ಎಚ್.ಎಸ್. ಸುಧೀಂದ್ರ ಮೃದಂಗ ಮತ್ತು ಓಂಕಾರ್ ಆರ್. ಘಟ ನುಡಿಸುತ್ತ ಕಛೇರಿಯನ್ನು ಆಸಕ್ತಿದಾಯಕವಾಗಿ ಮಾಡಿದರು.

ಅನುಭವಿ ಗಾಯಕ ಪಟ್ಟಾಭಿರಾಮ ಪಂಡಿತ್ ಮುತ್ತುಸ್ವಾಮಿ ದೀಕ್ಷಿತರ ಕೃತಿ ರಂಗಪುರ ವಿಹಾರ ಕೃತಿಯನ್ನು ಬೃಂದಾವನ ಸಾರಂಗ ರಾಗದಲ್ಲಿ, ತ್ಯಾಗರಾಜರ ರಚನೆ ಬಾಗಯಾನಯ್ಯ ಕೃತಿಯನ್ನು ಚಂದ್ರಜ್ಯೋತಿ ರಾಗದಲ್ಲಿ, ಎವ್ವರೂರ ಕೃತಿಯನ್ನು ಮೋಹನರಾಗದಲ್ಲಿ, ಎಂದರೂ ಮಹಾನು ಬಾವುಲು ಕೃತಿ, ಕೊಲುವೈ ಕೃತಿಯನ್ನು ಭೈರವಿ ರಾಗದಲ್ಲಿ, ರಾಗ ತಾನ ಪಲ್ಲವಿಯನ್ನು ಲತಾಂಗಿ ರಾಗದಲ್ಲಿ, ಪುರಂದರದಾಸರ ಮೋಸಹೋದೆ ಕೃತಿಯನ್ನು ಶುಭ ಪಂತುರಾವಳಿ ರಾಗದಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-36-1017320863

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.