ಬುಧವಾರ, ಏಪ್ರಿಲ್ 14, 2021
24 °C
ಖಜಾಂಚಿಯಾಗಿ ಲಿಂಗರಾಜು, ರಾಜ್ಯ ಪರಿಷತ್‌ಗೆ ಪ್ರದೀಪ್‌ ಅವಿರೋಧ ಆಯ್ಕೆ

ಕೃಷ್ಣೇಗೌಡ ನೌಕರರ ಸಂಘದ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ  ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕೃಷ್ಣೇಗೌಡ ಆಯ್ಕೆಯಾಗಿದ್ದಾರೆ.

ಕೃಷ್ಣೇಗೌಡ 52 ಮತ ಪಡೆದರೆ, ಇವರ ಪ್ರತಿಸ್ಪರ್ಧಿಗಳಾದ ಎಸ್. ಮಧು 17 ಮತ್ತು ನಾಯಕರಹಳ್ಳಿ ಮಂಜೇಗೌಡ ಶೂನ್ಯ ಮತಗಳಿಸಿದರು. ಒಂದು ಮತ ತಿರಸ್ಕೃತವಾಗಿದೆ.

ಬೆಳಗ್ಗೆ 11 ಗಂಟೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘಧ ಭವನದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಹಾಸನ ತಾಲ್ಲೂಕಿನ 62 ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಸೇರಿದಂತೆ ಒಟ್ಟು 70 ಮತದಾರರು ಶಾಂತಿಯುತವಾಗಿ ಹಕ್ಕು ಚಲಾವಣೆ ಮಾಡಿದರು.

ಸಂಜೆ 4 ಗಂಟೆವರೆಗೂ ಚುನಾವಣೆ ಪ್ರಕ್ರಿಯೆ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತ ಎಣಿಕಾ ಕಾರ್ಯ ಶುರುವಾಯಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಒಟ್ಟು ಮೂವರು ಅಭ್ಯರ್ಥಿಗಳ ಪೈಕಿ ಕೃಷ್ಣೇಗೌಡ ಅತಿ ಹೆಚ್ಚು ಮತ ಪಡೆದರು. ಚುನಾವಣಾ ಅಧಿಕಾರಿಯಾಗಿ ಬಿ.ಎ.ಗೋವಿಂದರಾಜು ಕರ್ತವ್ಯ ನಿರ್ವಹಿಸಿದರು.

ಮೀನುಗಾರಿಕೆ ಇಲಾಖೆಯ ಅಧೀಕ್ಷಕ ಲಿಂಗರಾಜು ಅವರು ಖಜಾಂಚಿಯಾಗಿ ಮತ್ತು ಜಿಲ್ಲಾ ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಎನ್.ಪ್ರದೀಪ್ ಕುಮಾರ್ ಅವರು ರಾಜ್ಯ ಪರಿಷತ್‌ಗೆ ಜುಲೈ 6 ರಂದು ಅವಿರೋಧ ಆಯ್ಕೆಯಾಗಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.