₹ 500 ಕೋಟಿ ನಷ್ಟದಲ್ಲಿ ಕೆಎಸ್ಆರ್‌ಟಿಸಿ

7
ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮಾಹಿತಿ

₹ 500 ಕೋಟಿ ನಷ್ಟದಲ್ಲಿ ಕೆಎಸ್ಆರ್‌ಟಿಸಿ

Published:
Updated:
ಹಾಸನದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭೇಟಿ ನೀಡಿ ಪರಿಶೀಲಿಸಿದರು. ಸಚಿವ ಎಚ್‌.ಡಿ. ರೇವಣ್ಣ ಇದ್ದರು.

ಹಾಸನ : ಕೆ.ಎಸ್.ಆರ್.ಟಿ.ಸಿ ಅಂದಾಜು ₹ 500 ಕೋಟಿ ನಷ್ಟದಲ್ಲಿದೆ ಲಭ್ಯವಿರುವ ಎಲ್ಲಾ ಸಂಪನ್ಮೂಲ ಬಳಸಿಕೊಂಡು ಜಾಹೀರಾತು ಸೇರಿದಂತೆ ಎಲ್ಲಾ ಸಾಧ್ಯತೆಗಳನ್ನು ಬಳಸಿ ಲಾಭ, ನಷ್ಟ ಸರಿದೂಗಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.

ಜಿಲ್ಲೆಯ ವಿವಿಧ ಬಸ್ ನಿಲ್ದಾಣ, ಡಿಪೋಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಹಾಸನ ಸರ್ಕಾರಿ ಪ್ರವಾಸಿ ಮಂದಿರದಲಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯಾದ್ಯಂತ ಎಲ್ಲಾ ಸಾರಿಗೆ ವ್ಯವಸ್ಥೆ ಒಂದು ನಿಯಂತ್ರಣಕ್ಕೆ ಬರಬೇಕು. ಬೆಂಗಳೂರಿನಲ್ಲಿ ಮೆಟ್ರೂ ಸಾರಿಗೆ ವ್ಯವಸ್ಥೆ ಪ್ರತ್ಯೇಕ ವಾಗಿದ್ದು, ಏಕರೂಪ ನಿಯಂತ್ರಣ ಮತ್ತು ಆದಾಯ ನಷ್ಟಗಳನ್ನು ಸರಿ ದೂಗಿಸಲು ಅನುಕೂಪಕಾರಿ ಎಂದು ಅಭಿಪ್ರಾಯಪಟ್ಟರು.

ಸಾರಿಗೆ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿಮಾಡಲು ಕ್ರಮವಹಿಸಲಾಗುತ್ತಿದೆ. ಕೆ.ಎಸ್.ಅರ್.ಟಿ.ಸಿ ನೌಕರಿಗೆ ಸಾಕಷ್ಟು ಉತ್ತಮ ವೇತನ ಸೌಲಭ್ಯ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರ ಇತರ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು

ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಜಿಲ್ಲೆಯ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು, ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಅದಕ್ಕೆ ಸಂಪೂರ್ಣ ಸಹಕಾರ ಭರವಸೆ ನೀಡಿದ್ದಾರೆ ಎಂದರು.

ಅಗತ್ಯಕ್ಕನುಗುಣವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣಗಳ ಅಭಿವೃದ್ಧಿ, ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಅರಸೀಕೆರೆ ಪ್ರಮುಖ ಸಂಪರ್ಕ ಕೇಂದ್ರವಾಗಿದ್ದು, ಮುಖ್ಯವಾದ ರೈಲ್ವೆ ಜಂಕ್ಷನ್ ಕೂಡ ಆಗಿದೆ. ಇಲ್ಲಿ ಹೊಸ, ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮನವಿ ಸಲ್ಲಿಸಿದ್ದು, ಜಾಗ ಹಸ್ತಾಂತರ ಆದ ತಕ್ಷಣ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

‘ಹಾಸನ ನಗರದ ಕೆ.ಎಸ್ ಅರ್.ಟಿ.ಸಿ ಬಸ್ ನಿಲ್ದಾಣದಿಂದ ಜಿಲ್ಲಾ ಆಸ್ಪತ್ರೆಗೆ ಸುಲಬವಾಗಿ ತಲುಪಲು ಎರಡು ರಸ್ತೆ ಮಾರ್ಗಗಳ ನಿರ್ಮಾಣ ಅಗಬೇಕಿದ್ದು, ಅದನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗುವುದು. ಆಸ್ಪತ್ರೆ ಸುಗಮವಾಗಿ ರೋಗಿಗಳು ಕರೆದೊಯ್ಯಲು ಅನುಕೂಲವಾಗುವಂತೆ ಲಘು ಸಂಚಾರಿ ವಾಹನ ಅತ್ಯಂತ ಕಡಿಮೆ ದರದಲ್ಲಿ ಒದಗಿಲು ಚಿಂತನೆ ನಡೆಸಲಾಗಿದೆ ಮಾಹಿತಿ ನೀಡಿದರು.

‘ನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ಹೊರ ಮೇಲ್ಮೈ ನಿರ್ಮಾಣ ಕಾರ್ಖಾನೆ ಯಲ್ಲಿ ತಿಂಗಳಲ್ಲಿ 15ಬಸ್ ಸಿದ್ದಗೊಳ್ಳುತ್ತಿವೆ. ಅದರ ಸಾಮರ್ಥ್ಯವನ್ನು 30ಕ್ಕೆ ಏರಿಸಲು ಸೂಚಿಸಲಾಗಿದೆ. ಅಲ್ಲಿನ ಕಾರ್ಮಿಕರ ಕೆಲವು ಸಮಸ್ಯೆಗಳಿದ್ದು, ಅವನ್ನು ಬಗೆ ಹರಿಸಲಾಗುವುದು ಎಂದು ಹೇಳಿದರು.

ಕೆ.ಎಸ್ ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ, ಉಮಾಶಂಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಾರಿಗೆ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್, ಕೆ.ಎಸ್.ಅರ್.ಟಿ.ಸಿ ಮುಖ್ಯ ಅಭಿಯಂತರ ಜಗದೀಶ್ ಚಂದ್ರ, ಕಾರ್ಯನಿರ್ವಾಹಕ ಅಭಿಯಂತರ ಪಾಲನೇತ್ರ ನಾಯಕ್, ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಯಶವಂತ್, ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್ ಕುಮಾರ್. ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !