ಸಾರಿಗೆ ಬಸ್‌ನಲ್ಲಿ ಜೆಡಿಎಸ್ ಕರಪತ್ರ ಸಾಗಣೆ

ಶನಿವಾರ, ಏಪ್ರಿಲ್ 20, 2019
31 °C
ಹಿರೀಸಾವೆ ಚೆಕ್‌ಪೋಸ್ಟ್‌ನಲ್ಲಿ ಪತ್ತೆ ಮಾಡಿದ ಚುನಾವಣಾ ಸಿಬ್ಬಂದಿ

ಸಾರಿಗೆ ಬಸ್‌ನಲ್ಲಿ ಜೆಡಿಎಸ್ ಕರಪತ್ರ ಸಾಗಣೆ

Published:
Updated:
Prajavani

ಹಿರೀಸಾವೆ: ಕೆಎಸ್ಆರ್‌ಟಿಸಿಯ ಎರಡು ಬಸ್‌ಗಳಲ್ಲಿ ಸಾಗಿಸುತ್ತಿದ್ದ ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದ 50 ಸಾವಿರ ಕರಪತ್ರಗಳನ್ನು ಚುನಾವಣಾ ಸಿಬ್ಬಂದಿ ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಕಡೆಯಿಂದ ಹಾಸನಕ್ಕೆ ಬರುತ್ತಿದ್ದ ಬಸ್‌ಗಳನ್ನು ತಪಾಸಣೆ ಮಾಡುವಾಗ ಕರಪತ್ರದ ಕಟ್ಟುಗಳು ಪತ್ತೆಯಾಗಿವೆ. ಜಿಲ್ಲಾ ಚುನಾವಣಾಧಿಕಾರಿ ಸೂಚನೆ ಮೇರೆಗೆ ಎರಡು ಬಸ್‌ಗಳಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್‌ಗಳಿಗೆ ಕಳುಹಿಸಲಾಯಿತು.

ಮಧ್ಯಾಹ್ನ 3 ಗಂಟೆಗೆ ಬಸ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ನಿರ್ವಾಹಕರಿಂದ ಲಿಖಿತ ಹೇಳಿಕೆ ಪಡೆದರು. ಸಂಜೆ 7 ಗಂಟೆಯಾದರೂ ಬಸ್‌ಗಳನ್ನು ಬಿಟ್ಟಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಈ ಬಸ್‌ಗಳನ್ನು ತಪಾಸಣೆ ಮಾಡಲಾಯಿತು ಎಂದು ಚುನಾವಣಾ ಸಿಬ್ಬಂದಿ ತಿಳಿಸಿದರು.

ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಹಾಸನಕ್ಕೆ ಲಗೇಜ್ ಮಾಡಿಸಿದ್ದು, ಕೂಲಿ ಕಾರ್ಮಿಕರು ಆ ಕರಪತ್ರಗಳ ಕಟ್ಟುಗಳನ್ನು ಬಸ್‌ಗೆ ತಂದು ಹಾಕಿದ್ದರು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.

ಪ್ರೊಬೇಷನರಿ ಐಎಎಸ್ ಅಧಿಕಾರಿ ಪ್ರಿಯಾಂಗ್‌, ತಾಲ್ಲೂಕು ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸಗೌಡ, ಇನ್‌ಸ್ಟೆಕ್ಟರ್ ಕಾಂತರಾಜ್, ಎಸ್ಐ ಗಿರೀಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟಲಿಂಗೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !