ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದ ಮತ್ತಿನಲ್ಲಿ ಮೋದಿ ಅಭಿಮಾನಿಯ ರಂಪಾಟ

Last Updated 25 ಮಾರ್ಚ್ 2019, 13:35 IST
ಅಕ್ಷರ ಗಾತ್ರ

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯೊಬ್ಬ ಕುಡಿದ ಮತ್ತಿನಲ್ಲಿ ಬಿ.ಎಂ.ರಸ್ತೆ ಮಧ್ಯೆ ನಿಂತು ಮೋದಿ, ಮೋದಿ ಎಂದು ವಾಹನಗಳನ್ನು ಅಡ್ಡಗಟ್ಟಿ ರಂಪಾಟ ಮಾಡಿದ ಘಟನೆ ನಡೆದಿದೆ.

ಕಂಠಪೂರ್ತಿ ಕುಡಿದು ನಿಲ್ಲಲು ಆಗದೇ ಎರಡು ಬಾರಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ. ರಸ್ತೆ ನಡುವೆ ನಿಂತು ವಾಹನಗಳನ್ನು ಅಡ್ಡಗಟ್ಟಿ ಮೋದಿಗೆ ಮತ ಹಾಕಬೇಕು. ದೇಶಕ್ಕೆ ಮೋದಿ ಬೇಕು ಎಂದು ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಇದೇ ರಸ್ತೆಯಲ್ಲಿ ಸಾಗಿದ ಪೊಲೀಸ್ ವಾಹನವನ್ನು ಅಡ್ಡಗಟ್ಟಿ ಮೋದಿಗೆ ಮತ ಹಾಕಿ ಎಂದ. ಆದರೆ, ಪೊಲೀಸರು ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಅಲ್ಲಿಂದ ಹೊರಟರು.

ರಸ್ತೆ ಇಕ್ಕೆಲಗಳಲ್ಲಿ ಸಾರ್ವಜನಿಕರು ಯುವಕನ ವರ್ತನೆ ನೋಡುತ್ತಾ ನಿಂತಿದ್ದರು. ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರು, ‘ಹುಡ್ಗ ಏಕೆ ಈ ರೀತಿ ವರ್ತಿಸುತ್ತಿದ್ದಾನೆ. ಮೊದಲು ಅವನನ್ನು ರಸ್ತೆ ಮಧ್ಯೆದಿಂದ ಕರೆದುಕೊಂಡು ಬನ್ನಿ’ ಎಂದು ಹೇಳಿದರು. ಇಬ್ಬರು ಯುವಕರು ಆತನನ್ನು ಹಿಡಿದು, ಕರೆತರುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT