ಅರಕಲಗೂಡು: ಪಟ್ಟಣದ ಪೇಟೆ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ 56ನೇ ಲಕ್ಷದೀಪೋತ್ಸವ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ದೇವಾಲಯದಲ್ಲಿ ಸುಪ್ರಭಾತ ಸೇವೆ ಬಳಿಕ, ರಾಮನಾಥಪುರ ರಸ್ತೆ ಚಿಲುಮೆ ಮಠದಲ್ಲಿ ಗಂಗಾ ಪೂಜೆ ನೆರವೇರಿಸಿ ಶನೇಶ್ವರ ದೇವರ ಉತ್ಸವ ಮೂರ್ತಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಉತ್ಸವದಲ್ಲಿ 108 ಕಳಶಗಳ ಮೆರವಣಿಗೆ, ವೀರಭದ್ರನೃತ್ಯ ಮರುಗು ನೀಡಿತು.

ದೇವಾಲಯದಲ್ಲಿನ ಮೂಲ ವಿಗ್ರಹಕ್ಕೆ ಕಳಶದಲ್ಲಿ ತಂದ ಗಂಗೋಧಕದಿಂದ ಕಳಾಶಾಭಿಷೇಕ, ನಡೆಸಿ ವಿಶೇಷ ಪೂಜೆ ನಡೆಸಲಾಯಿತು. ನವಗ್ರಹ ಪೂಜೆ, ಶನೇಶ್ವರ ಸ್ವಾಮಿ ಮೂಲಮಂತ್ರ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಪ್ರಧಾನ ಹೋಮ, ರುದ್ರಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಅರ್ಚಕರಾದ ವಿಶ್ವೇಶ್ವರ ಶರ್ಮ, ರವಿ, ರಘು, ಶ್ರೀನಿವಾಸ ಭಟ್ ಪೂಜಾ ಕಾರ್ಯ ನೆರವೇರಿಸಿದರು. ರಾತ್ರಿ ರವಿ ಕೃಪಾ ಪೋಷಿತ ಕಲಾ ಸಂಘದವರಿಂದ ಶನಿಪ್ರಭಾವ ನಾಟಾಕಾಭಿನಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.