ಹೊಳೆನರಸೀಪುರ: ನರಸಿಂಹಸ್ವಾಮಿ ಜಯಂತಿ ಪ್ರಯುಕ್ತ ಇಲ್ಲಿಯ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಸುಪ್ರಭಾತ ಸೇವೆ ನಡೆಯಿತು.

ಬ್ರಾಹ್ಮಿ ಮುಹೂರ್ತದಲ್ಲಿ ಅರ್ಚಕರಾದ ನಾರಾಯಣ ಹಾಗೂ ರಾಮಪ್ರಸಾದ್, ವೆಂಕಟನರಸಿಂಹನ್, ಅವರು ಭಾರತಾಂಬೆಗೆ ಜಯವಾಗಲಿ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಲಿ, ಭಾರತೀಯ ಯೋಧರ ಗೆಲುವಿಗಾಗಿ, ಶ್ರೇಯಸ್ಸಿಗಾಗಿ ಹಾಗೂ ಶತ್ರು ನಾಶಕ್ಕಾಗಿ ಸಂಕಲ್ಪ ಮಾಡಿ, ಪ್ರಾರ್ಥಿಸಿ, ಲಕ್ಷ್ಮಿನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ತಧಿ ಆರಾಧನೆ ಸೇವೆ, ಸಹಸ್ರ ನಾಮಾರ್ಚನೆ, ಮಂಗಳಾರತಿ ನೆರವೇರಿಸಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ನೀಡಿದರು.

ನಂತರ ಉತ್ಸವ ಮೂರ್ತಿಯನ್ನು ಉತ್ಸವದ ರಥದಲ್ಲಿ ಕೂರಿಸಿ, ಅಲಂಕರಿಸಿ, ರಥಬೀದಿ ಉತ್ಸವ ಹಾಗೂ ಪ್ರಾಕಾರೋತ್ಸವ ನಡೆಸಿದರು. ಇದೇ ಸಂದರ್ಭದಲ್ಲಿ ಭಕ್ತರು ಲಕ್ಷ್ಮೀನರಸಿಂಹ ಕಲ್ಯಾಣೋತ್ಸವ ನಡೆಸಿದರು. ಎಚ್.ಎನ್.ಕೃಷ್ಣಾ ಹಾಗೂ ಕಾವ್ಯ ಶ್ರೀಕೃಷ್ಣ ಉತ್ಸವ ಸೇವೆ ಸೇವಾರ್ಥದಾರರಾಗಿದ್ದರು. ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.