ಹೊಳೆನರಸೀಪುರ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾಗಿದ್ದ ಲಕ್ಷ್ಮಿ ಶಿಶುವಿಹಾರ ಪಾಳುಬೀಳುವ ಹಂತಕ್ಕೆ ತಲುಪಿದ್ದು, ಅಭಿವೃದ್ಧಿಯತ್ತ ಗಮನ ನೀಡಬೇಕು ಎನ್ನುವುದು ಇಲ್ಲಿನ ನಾಗರಿಕರ ಒತ್ತಾಯವಾಗಿದೆ.

ಒಂದೊತ್ತಿನ ಊಟಕ್ಕೆ ಪರದಾಡುತ್ತಿದ್ದೇವೆ, ಇನ್ನೆಲ್ಲಿ ವಿದ್ಯಾಭ್ಯಾಸ ಎಂದು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದ ಸ್ವಾತಂತ್ರ ಪೂರ್ವದ 1940 ರ ಅಕ್ಟೋಬರ್ 10 ರಂದು ಪ್ರಾರಂಭವಾದ ತಾಲ್ಲೂಕಿನ ಲಕ್ಷ್ಮಿ ಶಿಶುವಿಹಾರಕ್ಕೆ ಜಾಗ ನೀಡಿದ 6 ಜನರು, ತಲಾ ₹100 ಹಾಕಿ, ದಾನಿಗಳಿಂದ ಧನ ಸಹಾಯ ಪ್ರಾರಂಭಿಸಿದ್ದರು.

2 ಕೊಠಡಿಗಳಲ್ಲಿ ಪಾಠ, ಒಂದು ಕೊಠಡಿಯಲ್ಲಿ ಕಚೇರಿ, ಮತ್ತೊಂದು ಕೊಠಡಿಯಲ್ಲಿ ಶೌಚಾಲಯ, ಅಗತ್ಯಕ್ಕೆ ತಕ್ಕಷ್ಟು ಆಟದ ಮೈದಾನ ಇರುವ ಈ ಶಿಶುವಿಹಾರ ಆರಂಭಿಸಲು ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ಆಳ್ವಿಕೆಯಲ್ಲಿ ಸಂಸ್ಥಾನದ ವಿದ್ಯಾ ಸಚಿವರಾಗಿದ್ದ ಜೆ. ಅಪ್ಪಾಜಿಗೌಡ ಅವರಿಗೆ ಎಂ.ಸಿ .ರಂಗ ಅಯ್ಯಂಗಾರ್ ಅವರು ಪತ್ರ ಬರೆದು ವಿನಂತಿಸಿದ್ದರು. ಅದರಂತೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಟಿ. ರಾಮಯ್ಯನವರು ಶಿಶುವಿಹಾರದ ಪ್ರಾರಂಭೋತ್ಸವ ನಡೆಸಿದರು.

ಪ್ರಾರಂಭದಲ್ಲಿ ಮಕ್ಕಳಿಗೆ ಬೇಕಾದ ಪೀಠೋಪಕರಣ, ಆಟದ ಸಾಮಾನುಗಳು, ಪಾಠದ ಸಲಕರಣೆಗಳನ್ನು ಇನ್ನಿತರ ವಸ್ತುಗಳನ್ನು ಕೊಳ್ಳಲು ದಿವಂಗತ ಉದ್ದೂರಯ್ಯ, ನರಸಿಂಹಯ್ಯ, ಶ್ರೀಕಂಠಯ್ಯ, ವೈಕುಂಠಯ್ಯ, ತಮ್ಮಯ್ಯ, ವಕೀಲ ಎನ್.ಎಸ್. ರಾಘವನ್ ತಲಾ ₹100 ಅನ್ನು 1940 ರಲ್ಲಿ ನೀಡಿದ್ದರು. ನಂತರ ದಿವಾನ್ ಜೆ.ಪಿ. ರಾಮಸ್ವಾಮಿಯವರು ಈ ಶಿಶುವಿಹಾರವನ್ನು ನೋಡಲು ಬಂದಾಗ ₹500 ಕೊಟ್ಟು, ‘ಶಿಶುವಿಹಾರವನ್ನು ಚೆನ್ನಾಗಿ ನಡೆಸಿ. ಮಕ್ಕಳಿಗೆ ವಿದ್ಯಾಭ್ಯಾಸ, ಒಳ್ಳೆಯ ಸಂಸ್ಕಾರ ನೀಡಿ’ ಎಂದು ಹರಸಿದ್ದರು.

ನಂತರದ ದಿನಗಳಲ್ಲಿ ಕಟ್ಟಡ ಹಾಗೂ ಆಟದ ಮೈದಾನಕ್ಕೆ ಪುರಸಭೆ ಜಾಗ ನೀಡಿತ್ತು. ಎಂ.ಸಿ. ರಂಗ ಅಯ್ಯಂಗಾರ್ ₹2,500 ಹಾಗೂ ಸರ್ಕಾರದಿಂದ ₹5ಸಾವಿರ ಕೊಟ್ಟು, ಅಗತ್ಯಕ್ಕೆ ತಕ್ಕ ಕಟ್ಟಡವನ್ನು ಮಿರ್ಜಾ ಅಸ್ಕರಲಿ ಅವರಿಂದ ಕಟ್ಟಿಸಿದ್ದರು. ಇಷ್ಟೆಲ್ಲಾ ಆದ ನಂತರ ಒಂದು ಸಮಿತಿ ಮಾಡಿ ಶಿಕ್ಷಕಿ ಹಾಗೂ ಆಯಾರನ್ನು ನೇಮಿಸಿಕೊಂಡು ಸಮಿತಿಯ ಸದಸ್ಯರು ಅವರಿಗೆ ಸಂಬಳ ನೀಡುತ್ತಿದ್ದರು.

ಶಿಶುವಿಹಾರಕ್ಕೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾದ ನಂತರ, ಶುಲ್ಕ ನಿಗದಿ ಮಾಡಿ ಅದರಲ್ಲಿ ಶಿಶು ವಿಹಾರದ ನಿರ್ವಹಣೆ ಮಾಡುತ್ತಿದ್ದರು. ಈಗಿನ ಸಮಿತಿಯಲ್ಲಿ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ, ಇನ್ನಿತರರಿದ್ದಾರೆ. ಕಟ್ಟಡ ಬೀಳುವ ಪರಿಸ್ಥಿತಿ ಇರುವುದರಿಂದ ಪೋಷಕರು ಮಕ್ಕಳನ್ನು ಸೇರಿಸುತ್ತಿಲ್ಲ. 20 ವರ್ಷಗಳಿಂದ ಶಿಕ್ಷಕಿ ಆಗಿರುವ ಧನಲಕ್ಷ್ಮೀ ಹಾಗೂ ಆಯಾಗೆ ಸಂಬಳ ಕೊಡಲು ದುಡ್ಡಿಲ್ಲ.

ಅಂದು ಇಲ್ಲಿ ಕಲಿತ ಅನೇಕರು ಈಗ ದೊಡ್ಡ ಹುದ್ದೆಯಲ್ಲಿದ್ದಾರೆ. ಈ ಶಿಶುವಿಹಾರದಲ್ಲಿ ಹಲವು ದಶಕಗಳ ಕಾಲ ಶಿಕ್ಷಕಿಯಾಗಿದ್ದ ಲಕ್ಷ್ಮೀ ಅವರನ್ನು ಕಂಡಾಗ, ನಮಸ್ಕರಿಸಿಯೇ ಹೋಗುತ್ತಾರೆ.

ಕಟ್ಟಡದ ದುರಸ್ತಿ ಮಾಡಿಸಿಕೊಟ್ಟರೆ ಇಂದಿಗೂ ಕೂಡ ಮಕ್ಕಳು ನಮ್ಮ ಶಿಶುವಿಹಾರಕ್ಕೆ ಸೇರುತ್ತಾರೆ.
ಧನಲಕ್ಷ್ಮಿ, ಶಿಶುವಿಹಾರದ ಶಿಕ್ಷಕಿ

ಶಿಶುವಿಹಾರಕ್ಕೆ ಕಾಯಕಲ್ಪ ನೀಡಲು ಆರ್ಥಿಕ ಸಮಸ್ಯೆ ಇದೆ. ದಾನಿಗಳು ಈ ಕಟ್ಟಡ ದುರಸ್ತಿಗೆ ಸಹಕಾರ ನೀಡಿ.

ರೇಣುಕುಮಾರ್, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.