ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ಲಕ್ಷ್ಮಿ ವೆಂಕಟರಮಣ ಸ್ವಾಮಿ ರಥೋತ್ಸವ

Last Updated 6 ಫೆಬ್ರುವರಿ 2023, 7:22 IST
ಅಕ್ಷರ ಗಾತ್ರ

ಹೊಳೆನರಸೀಪುರ: ತಾಲ್ಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆಯ ಲಕ್ಷ್ಮೀವೆಂಕಟರಮಣಸ್ವಾಮಿ ಹಾಗೂ ಬೆಟ್ಟದ ರಂಗನಾಥಸ್ವಾಮಿ ರಥೋತ್ಸವವು ಭಾನುವಾರ ಸಂಭ್ರಮ, ಸಡಗರದಿಂದ ನೆರವೇರಿತು.

ಮುಂಜಾನೆ ದೇವಾಲಯದ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜೆಗಳು ನೆರವೇರಿದವು. ಬಳಿಕ ಸೂರ್ಯ ಮಂಡಲೋತ್ಸವ, ನಿತ್ಯಾರಾಧನೆ, ಬಲಿಪ್ರದಾನ, ಕೃಷ್ಣಗಂಧೋತ್ಸವ ನಡೆಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.

ಬೆಳಿಗ್ಗೆ 11 ರಿಂದ 11.30ಕ್ಕೆ ಸಲ್ಲುವ ಪುಷ್ಯ ನಕ್ಷತ್ರದಲ್ಲಿ ಶಾಸಕ ಎಚ್.ಡಿ.ರೇವಣ್ಣ ದಂಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತ ರಥಬೀದಿಯಲ್ಲಿ ತೇರನ್ನು ಎಳೆದರು.

ವಿದ್ವಾನ್ ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಆರ್ಚಕ ಎಂ.ಎಸ್. ಜನಾರ್ದನ ಹಾಗೂ ಸಹಾಯಕರು ಜಾತ್ರಾ ಮಹೋತ್ಸವದ ಪೂಜೆಗಳನ್ನು ನೆರವೇರಿಸಿದರು. ದೇವಾಲಯದ ಜೀರ್ಣೋದ್ಧಾರ ಕಾರ್ಯ ಜರುಗುತ್ತಿರುವ ಕಾರಣದಿಂದ ಸಂಪ್ರದಾಯದ ಆಚರಣೆಗೆ ಭಂಗವಾಗದಂತೆ ಪೂಜಾ ಕಾರ್ಯ ಜರುಗಿತು.

ಹಳೇಕೋಟೆ ಬೆಟ್ಟದ ಮೇಲಿನ ರಂಗನಾಥಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಕೇಶವಮೂರ್ತಿ ಹಾಗೂ ಗೋಪಾಲಭಟ್ಟರ ನೇತೃತ್ವದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ, ರಥೋತ್ಸವ ನಡೆಸಲಾಯಿತು. ಭಕ್ತಾದಿಗಳಿಗೆ ಪಟ್ಟಣದ ದೊಡ್ಡಮನೆ ಕುಟುಂಬದವರು ಮತ್ತು ಗೊರೂರು ಅಡ್ಡೋಣಿ ಕುಟುಂಬ ಸದಸ್ಯರು ಭೋಜನದ ವ್ಯವಸ್ಥೆ ಮಾಡಿದ್ದರು.

ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂರ್ಯಕುಮಾರ್, ಉಪ ತಹಶೀಲ್ದಾರ್ ಶಿವಕುಮಾರ್, ಡಿವೈಎಸ್ಪಿ ಕೆ.ಮುರಳೀಧರ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಅರುಣ್, ವಿನಯ್ ಕುಮಾರ್, ಅಶ್ವಿನಿ, ಸತೀಶ್, ಹರೀಶ್ ಬಣಕರ್, ಮಹಾಂತೇಶ್‌, ಗ್ರಾಮದ ಹಿರಿಯರಾದ ಶೆಟ್ಟಿಗೌಡ, ಸುಬ್ಬರಾಜು, ಜಯಪ್ರಕಾಶ್, ಅಶೋಕ, ಸೀತರಾಮು, ಸೋಮಶೇಖರ, ವಸಂತಕುಮಾರ್, ರಮೇಶ್, ಚಂದ್ರು, ಸುಶೀಲಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT