ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗೆ ಜಮೀನು ವಶ: ರೈತರ ವಿರೋಧ

Last Updated 9 ಮೇ 2022, 15:53 IST
ಅಕ್ಷರ ಗಾತ್ರ

‌ಹಾಸನ: ಕೈಗಾರಿಕೆಗೆ ಜಮೀನು ವಶಪಡಿಸಿಕೊಳ್ಳುವುದನ್ನುವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅರಸೀಕೆರೆ ತಾಲ್ಲೂಕಿನ ಮೈಲನಹಳ್ಳಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಮೈಲನಹಳ್ಳಿ, ಹುಣಸೆಘಟ್ಟ ಗ್ರಾಮಗಳಲ್ಲಿ 142 ಎಕರೆ ರೈತರ ಜಮೀನನ್ನು ಕೆಐಎಡಿಬಿ ವಶಪಡಿಸಿ
ಕೊಳ್ಳಲು ಮುಂದಾಗಿದ್ದು, ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಈಗಾಗಲೇ ಗ್ರಾಮದಲ್ಲಿ ಸುಮಾರು 70 ಎಕರೆ ಜಮೀನನ್ನು ಎತ್ತಿನಹೊಳೆ, ಗ್ಯಾಸ್ ಪೈಪ್‌ಲೈನ್, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಯೋಜನೆಗಳಿಗೆ ಭೂಮಿಯನ್ನು ಬಿಟ್ಟುಕೊಟ್ಟಿದ್ದು, ಉಳಿಕೆ ಅಲ್ಪ ಸ್ವಲ್ಪ ಜಮೀನು ಜೀವನಕ್ಕೆ ದಾರಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಭೂಮಿಯನ್ನು ಮುಂದಿನ ಯೋಜನೆಗೆ ಪಡೆದುಕೊಳ್ಳಬಾರದು ಎಂದು ಆಗ್ರಹಿಸಿದರು.

ಕೆಐಎಡಿಬಿ ಮೈಸೂರು ಕಚೇರಿ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾ
ರಿಗೂ ತಕಾರರು ಅರ್ಜಿ ಸಲ್ಲಿಸಿದರೂ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳಿಂದ ನೋಟಿಸ್ ಸಹ ಪಡೆದುಕೊಂಡಿಲ್ಲ. ಆದರೂ ಅಧಿಕಾರಿಗಳು ಎಕರೆಗೆ ₹ 18 ಲಕ್ಷ ನಿಗದಿ ಪಡಿಸಿ, ನೋಟಿಸ್ ನೀಡಲು ಮುಂದಾಗಿದ್ದಾರೆ. ಕೂಡಲೇ ಈ ಪ್ರಸ್ತಾವ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಅಶೋಕ್, ಕುಮಾ ರಪ್ಪ, ಶಂಕರಪ್ಪ, ಎಂ.ಎಸ್.ಲೋಕೇಶ್, ಶರತ್, ಧರ್ಮಪ್ರಕಾಶ್‌, ಸುರೇಶ್, ಬಸವ
ರಾಜ್, ಹೊನ್ನಪ್ಪ, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT