ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಇಲ್ಲಿನ ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಸತ್ಯನಾರಾಯಣ ಎಂ.ಸಿ. ಅವರ ನಿವಾಸದ ಮೇಲೆ ಗುರುವಾರ ಬೆಳಗಿನ ಜಾವ ದಾಳಿ ನಡೆಸಿದರು.

ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ಶಿಲ್ಪಾ ನೇತೃತ್ವದ ತಂಡವು ನಗರದ ರಕ್ಷಣಾಪುರಂನಲ್ಲಿರುವ ಸತ್ಯನಾರಾಯಣ ಅವರ ಮನೆಗೆ ಬೆಳಗಿನ ಜಾವವೇ ಬಂದಿತ್ತು. ಆದರೆ, ಸತ್ಯನಾರಾಯಣ ಕುಟುಂಬದವರು ಬಾಗಿಲು ತೆರೆಯದೇ ಇರುವದರಿಂದ ನಾಲ್ಕು ಗಂಟೆ ಕಾಯಬೇಕಾಯಿತು.

ಇಲ್ಲಿನ ವಿಜಯನಗರದಲ್ಲಿರುವ ಕಾಂಗ್ರೆಸ್ ಮುಖಂಡ ಜೆಸಿಬಿ ಚಂದ್ರು ಒಡೆತನದ ಪಾಂಡಿತ್ಯ ಯೂರೋ ಸ್ಕೂಲ್ನಲ್ಲಿಯೂ ಲೋಕಾಯುಕ್ತ ತಂಡ ಶೋಧ ಕಾರ್ಯಾಚರಣೆ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದೆ.

ಎಂಜಿನಿಯರ್ ಸತ್ಯನಾರಾಯಣ ಅವರು ತಮ್ಮ ಕುಟುಂಬದವರ ಹೆಸರಿನಲ್ಲಿ ಈ ಶಾಲೆಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆ ಸತ್ಯನಾರಾಯಣ ಹಾಗೂ ಜೆಸಿಬಿ ಚಂದ್ರು ನಡುವಿನ ನಂಟಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಹಾನಗರ ಪಾಲಿಕೆಯ ಸತ್ಯನಾರಾಯಣ ಅವರ ಕಚೇರಿಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯ ಡ್ರಾಯರ್ಗಳ ತರಿಸಿ, ಕಚೇರಿಯ ಸಂಪೂರ್ಣ ಪರಿಶೀಲನೆ ನಡೆಸಲಾಗಿದೆ.

ಕಾರನ್ನು ಬಿಡಲಿಲ್ಲ: ಸತ್ಯನಾರಾಯಣ ಅವರ ಮನೆಯನ್ನೆಲ್ಲ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳು, ಮನೆಯ ನೆಲ ಅಂತಸ್ತಿನ ಕಾರಿನ ಶೆಡ್ ಹಾಗೂ ಕಾರುಗಳನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು.

ಸತ್ಯನಾರಾಯಣ ಅವರಿಗೆ ಬೆಂಗಳೂರು ನಗರದಲ್ಲಿಯೂ ಅನೇಕ ಅಪಾರ್ಟ್ಮೆಂಟ್ ಹಾಗೂ ನಿವೇಶನಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ನಗರ ಸೇರಿದಂತೆ ಇತರೆಡೆಯ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ನಂಟು ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸತ್ಯನಾರಾಯಣ ಅವರ ಮನೆಯಲ್ಲಿ ನಿವೇಶನ ಸೇರಿದಂತೆ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.