ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಸತ್ಯನಾರಾಯಣ ಎಂ.ಸಿ. ಅವರ ನಿವಾಸದ ಮೇಲೆ ಗುರುವಾರ ಬೆಳಗಿನ ಜಾವ ದಾಳಿ ನಡೆಸಿದರು.
.ದೇವನಹಳ್ಳಿ ತಾಲ್ಲೂಕು ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ.
ಬೆಳಿಗ್ಗೆ ಸುಮಾರು 5.15ರ ಸುಮಾರಿಗೆ ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ಶಿಲ್ಪಾ ನೇತೃತ್ವದ ತಂಡವು ಹಾಸನ ನಗರದ ರಕ್ಷಣಾಪುರಂನಲ್ಲಿರುವ ಸತ್ಯನಾರಾಯಣ ಅವರ ಮನೆಗೆ ಆಗಮಿಸಿತು. ಅಧಿಕಾರಿಗಳು ಬಂದ ಕೂಡಲೇ ಮನೆಯ ದೀಪಗಳನ್ನು ಆರಿಸಿ, ಬಾಗಿಲು ತೆರೆಯದೆ ಇರುವುದರಿಂದ ಸ್ಥಳದಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು.

ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮನೆ ಬಾಗಿಲು ತೆರೆಯಿಸಲು ಅಧಿಕಾರಿಗಳು ಹರಸಾಹಸ ಪಟ್ಟರು. ಕಿಟಕಿಗಳನ್ನು ಬಡಿದು, ಕೂಗಿದರೂ ಪ್ರತಿಕ್ರಿಯೆ ದೊರಕಲಿಲ್ಲ. ಈ ನಡುವೆ ಸತ್ಯನಾರಾಯಣ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕ ಸಾಧಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಲೊಕೇಶನ್ ಪರಿಶೀಲನೆಯಲ್ಲಿಯೂ ಅವರು ಮನೆಯಲ್ಲೇ ಇರಬಹುದೆಂಬ ಅನುಮಾನ ಬಲವಾಯಿತು.
.ಮೈಸೂರು: ಒಳಚರಂಡಿ ಮಂಡಳಿ ಅಧಿಕಾರಿ ಇಕ್ಬಾಲ್ ಹಸೀಸ್ ಮನೆಗೆ ಲೋಕಾಯುಕ್ತ ದಾಳಿ.
ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ತೆರಳಿದರು. ಬಾಗಿಲು ತೆರೆಯದಿದ್ದರೆ ಕಾನೂನು ಪ್ರಕಾರ ಒಡೆದು ತೆರೆಯುವ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು. ಹಾಸನ ನಗರ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆಯುವಂತೆ ಎಚ್ಚರಿಕೆ ನೀಡಿದರು. ಸಿಸಿ ಕ್ಯಾಮೆರಾ ಎದುರು ನಿಂತು ಬಾಗಿಲು ತೆರೆಯುವಂತೆ ಮನವಿ ಮಾಡಲಾಯಿತು.

ನಂತರ ಸತ್ಯನಾರಾಯಣ ಅವರ ಸಹೋದರಿ ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆಯುವಂತೆ ಮನವಿ ಮಾಡಿದ ನಂತರ, ಸತತ ನಾಲ್ಕು ಗಂಟೆಗಳ ಬಳಿಕ ಬಾಗಿಲು ತೆರೆಯಲಾಯಿತು. ಇದಾದ ಬಳಿಕ ಲೋಕಾಯುಕ್ತ ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿ ಶೋಧ ಕಾರ್ಯ ಆರಂಭಿಸಿದರು.

ಅಕ್ರಮ ಆಸ್ತಿ ಗಳಿಕೆ ಸಂಬಂಧ ಎಫ್ಐಆರ್ ದಾಖಲಿಸಿ, ಶೋಧ ವಾರಂಟ್ನೊಂದಿಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸತ್ಯನಾರಾಯಣ ಅವರ ಮನೆ ಜೊತೆಗೆ ಅವರ ಪತ್ನಿ ಒಡೆತನದ ಯೂರೋಕಿಡ್ಸ್ ಶಾಲೆ ಹಾಗೂ ಪಾಂಡಿತ್ಯ ಎಜುಕೇಷನ್ ಸೊಸೈಟಿಯ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
.ಚಿಕ್ಕಬಳ್ಳಾಪುರ: ಪಿಎಸ್ಐ, ಎಎಸ್ಐ ಲೋಕಾಯುಕ್ತ ಬಲೆಗೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.