ಮಾಡಾಳು ಸ್ವರ್ಣಗೌರಿ ದರ್ಶನಕ್ಕೆ ಲಕ್ಷಾಂತರ ಭಕ್ತರು

7

ಮಾಡಾಳು ಸ್ವರ್ಣಗೌರಿ ದರ್ಶನಕ್ಕೆ ಲಕ್ಷಾಂತರ ಭಕ್ತರು

Published:
Updated:

ಅರಸೀಕೆರೆ (ಹಾಸನ ಜಿಲ್ಲೆ): ತಾಲ್ಲೂಕಿನ ಮಾಡಾಳು ಗ್ರಾಮದ ಸ್ವರ್ಣಗೌರಿ ದೇವಿ (ಗೌರಮ್ಮ) ದೇವಿ ದರ್ಶನಕ್ಕೆ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದಲೂ ಭಕ್ತರ ದಂಡು ಹರಿದು ಬರುತ್ತಿದೆ. 

ಹುಳಿಯಾರು ರಸ್ತೆಯಲ್ಲಿರುವ ಈ ಪುಟ್ಟ ಗ್ರಾಮಕ್ಕೆ ಪ್ರತಿವರ್ಷ ಗೌರಿಹಬ್ಬದ ಸಂದರ್ಭ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ರಾಜ್ಯದ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯುವ ಗ್ರಾಮದಲ್ಲಿ ದೇವಿಯ ಸದ್ಭಾವನಾ ಮಹೋತ್ಸವ ಶ್ರದ್ಧಾ–ಭಕ್ತಿಯ

ದುಗ್ಗಳೋತ್ಸವ (ಕರ್ಪೂರದ ಆರತಿ) ಈ ಉತ್ಸವದ ವೈಶಿಷ್ಟ್ಯ. ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಕರ್ಪೂರ ಹಚ್ಚಿ ಹರಕೆ ತೀರಿಸುತ್ತಾರೆ. ದೇವಾಲಯದ ಮುಂಭಾಗ ನಿರ್ಮಿಸಿರುವ ಕರ್ಪೂರದ ಕುಂಡದಲ್ಲಿ ಅಗ್ನಿಜ್ವಾಲೆ ಮುಗಿಲೆತ್ತರಕ್ಕೆ ಪ್ರಜ್ವಲಿಸುತ್ತದೆ.

ಗೌರಿಹಬ್ಬದ ದಿನವೂ ಸೇರಿದಂತೆ ಒಟ್ಟು 10 ದಿನ ಗ್ರಾಮದಲ್ಲಿ ಜನಜಾತ್ರೆ. ಅರಸೀಕೆರೆ–ಹುಳಿಯಾರು ರಸ್ತೆಯ ಎರಡು ಬದಿ ಹಾಗೂ ಗ್ರಾಮ ಪ್ರವೇಶಿಸುವ ರಸ್ತೆಯ ಎರಡು ಬದಿಗಳಲ್ಲಿ ಸಂತೆಯ ವಾತಾವರಣ. ಅಂಗಡಿಗಳು ಹಾಗೂ ಕೊಲಂಬಸ್‌ ಜೇಂಟ್‌, ಪುಟಾಣಿ ರೈಲುಗಾಡಿ ಸೇರಿದಂತೆ ಮಕ್ಕಳನ್ನು ಮನರಂಜಿಸುವ ವಿವಿಧ ಆಟೋಟಗಳು ಕಣ್ಮನ ಸೆಳೆಯುತ್ತವೆ.

ಸಂಗಮದೊಂದಿಗೆ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ವೈಭವೋಪೇತವಾಗಿ ನಡೆಯುವುದು ವಾಡಿಕೆ.

ಗೌರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಈಗ 154ನೇ ವರ್ಷದ ಸಂಭ್ರಮ. ಬಸವೇಶ್ವರ ದೇವಾಲಯದಲ್ಲಿ ಕೋಡಿಮಠದ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗೌರಮ್ಮ ದೇವಿಗೆ ಸತತ ಒಂಬತ್ತು ದಿನ ತ್ರಿಕಾಲ ಪೂಜೆ ಸಲ್ಲಿಸಲಾಗುತ್ತಿದೆ. ಚಿನ್ನಾಭರಣ ಧರಿಸದ ದೇವಿ ಸೀರೆ, ದಾಸೋಹಕ್ಕೆ ಅಕ್ಕಿ ಸ್ವೀಕರಿಸುತ್ತಾಳೆ. ಕರ್ಪೂರದ ಆರತಿ ಅಮ್ಮನವರಿಗೆ ಇಷ್ಟವಂತೆ.

ಹರಕೆ ತೀರಿಸಲು ಅಗ್ನಿಕುಂಡದಲ್ಲಿ ಕರ್ಪೂರ ಹಚ್ಚುತ್ತಾರೆ. ಹಾಗೆಯೇ ದೇವಾಲಯದ ಆವರಣದಲ್ಲಿ ಅಕ್ಕಿ ಕೊಡುತ್ತಾರೆ. ಹರಕೆ ರೂಪದಲ್ಲಿ ಸುಟ್ಟ ಕರ್ಪೂರದ ಮೌಲ್ಯ ಕಳೆದ ವರ್ಷ ₹30 ಲಕ್ಷ ಮೀರಿತ್ತು. ವರ್ಷದಿಂದ ವರ್ಷಕ್ಕೆ ದೇವಿ ದರ್ಶನಕ್ಕೆ ಬರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ.

ಪ್ರತಿಷ್ಠಾಪನೆಯ 10ನೇ ದಿನ ವಿಜೃಂಭಣೆಯ ಭವ್ಯ ಉತ್ಸವದ ನಂತರ ದೇವಿಯನ್ನು ಕಲ್ಯಾಣಿಯಲ್ಲಿ ವಿಸರ್ಜಿಸಲಾಗುತ್ತದೆ. ದೇವಿಯ ದರ್ಶನಕ್ಕೆ ಪ್ರತಿದಿನ ಕಿ.ಮೀ.ಗಟ್ಟಲೆ ಪಾಳಿ ಇರುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !