ಕಿಕ್ಕೇರಿ: ಹೋಬಳಿಗೆ ಸಂಪರ್ಕ ಕೊಂಡಿಯಾಗಿರುವ ಮಾದಾಪುರ ಗೇಟ್ ಬಳಿ ಸಾರಿಗೆ ವಾಹನಗಳ ನಿಲುಗಡೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಗೇಟ್ ಬಳಿ ಬಸ್ ನಿಲುಗಡೆಗೆ ಕೇಂದ್ರ ಕಚೇರಿ ಮುಖ್ಯ ಸಂಚಾರಿ ಅಧಿಕಾರಿಗಳ ಆದೇಶವಿದ್ದರೂ ಬಸ್ ನಿರ್ವಾಹಕರು ಮೊಂಡುವಾದ ಮಾಡುತ್ತಾರೆ. ಈ ಹಿಂದೆ ಗೇಟ್ಗೆ ಟಿಕೇಟ್ ನೀಡಿ ನಿಲ್ಲಿಸುತ್ತಿದ್ದ ಅರಸೀಕೆರೆ ಡಿಪೋ ಹಲವು ಬಸ್ಗಳೂ ಈಚೆಗೆ ನಿಲ್ಲಿಸುತ್ತಿಲ್ಲ. ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಈ ನಿಲ್ದಾಣವು ಉದ್ದಿನಮಲ್ಲನ ಹೊಸೂರು, ಊಗಿನಹಳ್ಳಿ, ಈಚಲುಗುಡ್ಡೆಕಾವಲು, ಗಾಣದಹಳ್ಳಿ, ಗಾಣದಹಳ್ಳಿ ಕೊಪ್ಪಲು, ತುಳಸಿ, ಮಂಡಲೀಕನಹಳ್ಳಿ, ಐಕನಹಳ್ಳಿ, ಬಸವನಹಳ್ಳಿ, ಕಾಂತರಾಜಪುರ, ಕಡಹೆಮ್ಮಿಗೆ, ಮಾದಾಪುರ, ಹಳೆಮಾದಾಪುರದಂತಹ ಹಲವು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಬಸ್ ನಿಲ್ಲದಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕಿಕ್ಕೇರಿ ಹೋಬಳಿ ಕೇಂದ್ರಕ್ಕೆ 5 ಕಿ.ಮೀ. ಕಾಲ್ನಡಿಗೆಯಲ್ಲಿ ಅಥವಾ ಖಾಸಗಿ ವಾಹನಗಳನ್ನು ಆಶ್ರಯಿಸಿ ಬರಬೇಕಿದೆ. ಹೆಣ್ಣುಮಕ್ಕಳಿಗೆ ಓಡಾಡಲು ಕಷ್ಟವಾಗಲಿದೆ. ಕೂಡಲೇ ಇತ್ತ ಅಧಿಕಾರಿಗಳು ಗಮನಹರಿಸದಿದ್ದರೆ ಹೋರಾಟ ಅನೀವಾರ್ಯವಾಗಲಿದೆ’ ಎಂದು ಎಚ್ಚರಿಸಿದ್ದಾರೆ.

‘ಬಸ್ ನಿಲುಗಡೆಯಾದರೆ ನೂರಾರು ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳಬಹುದು’ ಎಂದು ಊಗಿನಹಳ್ಳಿಯವಿದ್ಯಾರ್ಥಿ ಎಚ್.ಎಂ. ದಯಾನಂದ್ ತಿಳಿಸಿದರು.

ಪ್ರತಿಭಟನೆಯಲ್ಲಿ ಊಗಿನಹಳ್ಳಿ ಗ್ರಾಮದ ರೇಖಾ, ಹೇಮಂತ್, ಮಹೇಶ್, ನಿಂಗೇಗೌಡ, ವಿಜಯಕುಮಾರ್, ತುಳಸಿ ದಯಾನಂದ್, ನಾಗಣ್ಣ, ಉದ್ದಿನಮಲ್ಲನಹೊಸೂರು ಮಂಜೇಗೌಡ, ಚಂದ್ರ ಶೇಖರ್, ಪುಟ್ಟಲಿಂಗ, ಐಕನಹಳ್ಳಿ ರಮೇಶ್, ಗಾಣದಹಳ್ಳಿ ತನ್ಮಯ್, ಸಣ್ಣೇಗೌಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-40-761692376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.