ಮದ್ಯದಂಗಡಿಗೆ ಅನುಮತಿ ನೀಡಬೇಡಿ

7
ಸಿಪಿಸಿ, ರಾಘವೇಂದ್ರ ಬಡಾವಣೆ ನಿವಾಸಿಗಳ ಧರಣಿ

ಮದ್ಯದಂಗಡಿಗೆ ಅನುಮತಿ ನೀಡಬೇಡಿ

Published:
Updated:
Deccan Herald

ಹಾಸನ: ಸಕಲೇಶಪುರ ಪಟ್ಟಣದ ಸಿ.ಪಿ.ಸಿ ಮತ್ತು ರಾಘವೇಂದ್ರ ಬಡಾವಣೆ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಿಪಿಸಿ ಮತ್ತು ರಾಘವೇಂದ್ರ ಬಡಾವಣೆಯಲ್ಲಿ ಎಲ್ಲಾ ಸಮುದಾಯದವರು ಆತ್ಮಿಯತೆಯಿಂದ ವಾಸಿಸುತ್ತಿದ್ದು, ಇಂತಹ ಜನವಸತಿ ಇರುವ ಪ್ರದೇಶದಲ್ಲಿ ಕೆಲವು ಪ್ರಭಾವಿಗಳು ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಮದ್ಯದಂಗಡಿ ತೆರೆಯುವುದರಿಂದ ಅಹಿತಕರ ಘಟನೆಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ. ಹಾಗಾಗಿ ಈ ಪ್ರದೇಶಕ್ಕೆ ವೈನ್‌ಸ್ಟೋರ್‌ ಅವಶ್ಯಕತೆ ಇಲ್ಲ. 2016ರಲ್ಲಿ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿ ಅಂಗಡಿ ತೆರೆಯಲು ಬಿಟ್ಟಿರಲಿಲ್ಲ. ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೂ ಮನವಿ ಮಾಡಲಾಗಿತ್ತು. ಆಗ ಪಟ್ಟಣ ಪ್ರದೇಶದಿಂದ ಬೇರೆ ಕಡೆಗಳಲ್ಲಿ ಮದ್ಯದ ಅಂಗಡಿ ತೆರೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಒಂದು ವರ್ಷ ಸುಮ್ಮನಿದ್ದ ಪ್ರಭಾವಿಗಳು ಇದೀಗ ಮತ್ತೆ ಬಡಾವಣೆಯ ವ್ಯಾಪ್ತಿಯಲ್ಲಿ ತೆರೆಯಲು ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಜನ ಸಾಮಾನ್ಯರಿಗೆ ತೊಂದರೆ ಆಗುವುದರಿಂದ ಜಿಲ್ಲಾಧಿಕಾರಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒತ್ತಡಕ್ಕೆ ಮಣಿದು ಅನುಮತಿ ನೀಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಡಾವಣೆ ನಿವಾಸಿಗಳಾದ ಅಷರಫ್, ಬಾಬು, ಗೋವಿಂದ, ಅನ್ನಪೂರ್ಣ, ರಘು, ನಳಿನಿ ಹಾಗೂ ಇತರರು ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !