ಆಲೂರು: ಕೆಂಚಾಂಬಿಕೆ ದೊಡ್ಡಜಾತ್ರೆಗೆ ಸಂಬಂಧಿಸಿದ 48 ಹಳ್ಳಿಗಳ ಪೈಕಿ, ಯಸಳೂರು ಹೋಬಳಿ ಮಾಗಲು ಗ್ರಾಮದ ಕೆಂಚಾಂಬಿಕೆ ಕಟ್ಟೆಯಲ್ಲಿ ಹಗಲು ಸುಗ್ಗಿಯು ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಪಟೇಲರು, ಹಿರಿಯರ ಸಮ್ಮುಖದಲ್ಲಿ ನರಹರಿ ಭಟ್ ಹಾಗೂ ಸಂಗಡಿಗರ ನೇತೃತ್ವದ ಪುರೋಹಿತವರ್ಗ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ನಂತರ ದೇವಿಗೆ ಕೆಂಡಕೊಂಡ ಸೇವೆ ನಡೆಯಿತು.

ಹಲವಾರು ಭಕ್ತರು ಹರಕೆ ಸಲ್ಲಿಕೆಯ ರೂಪದಲ್ಲಿ ಕೆಂಡ ಹಾಯ್ದು ತಮ್ಮ ಭಕ್ತಿ ಮೆರೆದರು. ಸುಗ್ಗಿ ಕಟ್ಟೆಯಲ್ಲಿ ಗ್ರಾಮದ ಪುರುಷರು, ಮಹಿಳೆಯರು, ಯುವಕ, ಯುವತಿಯರು ಸುಗ್ಗಿ ಕುಣಿದು ಪುರಾತನ ಜಾನಪದ ಕಲೆಗೆ ಮೆರುಗು ತಂದರು.

ಬಿಲ್ಗೊಳ ಇತಿಹಾಸ: ಮಾಗಲು ಗ್ರಾಮದಲ್ಲಿ ಕೆಂಚಾಂಬಿಕೆಯು ಹೇಮಾವತಿ ನದಿಯ ಸನಿಹದಲ್ಲಿ ನೆಲೆಸಿದ್ದಾಳೆ. ಕೆಂಚಾಂಬಿಕೆ ದೇವಿಯು ತನ್ನ ನಾಲಿಗೆ ಚಾಚಿ ರಕ್ಕಸರು ಮತ್ತು ಬಿಲ್ಲನ್ನು ಬಳಸಿ ಅನೇಕ ಮರಿ ರಕ್ಕಸರನ್ನು ಸಂಹರಿಸಿದ್ದಳು. ಬಳಸಿದ ಬಿಲ್ಲನ್ನು ಎಸೆದಾಗ ಅಲ್ಲಿ ಒಂದು ಕೊಳ ನಿರ್ಮಾವಾಯಿತು. ಅದನ್ನು ಇಂದಿಗೂ ಬಿಲ್ಗೊಳ ಎಂದು ಕರೆಯಲಾಗುತ್ತಿದೆ. ಇದು ಹರಿಹಳ್ಳಿಯಲ್ಲಿ ನೆಲೆಸಿರುವ ಕೆಂಚಾಂಬಿಕೆಯ ಮೂರನೆ ಕಲ್ಯಾಣಿ ಎನ್ನಲಾಗಿದೆ.

ಪುರಾತನ ಕಾಲದಿಂದಲೂ ಗ್ರಾಮದವರೆಲ್ಲ ಸೇರಿ ಒಂದು ದಿನ ಸುಗ್ಗಿ ಕಟ್ಟೆಯಲ್ಲಿ ಸ್ಥಳೀಯ ಗ್ರಾಮೀಣ ವಾದ್ಯಕ್ಕೆ ತಕ್ಕಂತೆ ಸುಗ್ಗಿ ಕುಣಿಯುವ ಮೂಲಕ ದೇವಿಗೆ ಸಂಪನ್ನರಾಗುತ್ತಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ನರಹರಿ ಭಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-36-2081408887

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.