ಹಿರೀಸಾವೆ: ಹೋಬಳಿಯ ಏಳು ಗ್ರಾಮಗಳಾದ ಮಾದಲಗೆರೆ, ನಿಂಬೇಹಳ್ಳಿ, ಮಹದೇಶ್ವರ ಬಡಾವಣೆ, ಎಂ.ಕೆ.ಚಿಕ್ಕೇನಹಳ್ಳಿ, ಎಂ.ಕೆ.ಹೊಸೂರು, ಲಕ್ಷ್ಮಿಪುರ, ರಂಗನಾಥಪುರದವರ ಸಹಯೋಗದಲ್ಲಿ, ಮಾದಲಗೆರೆ–ನಿಂಬೇಹಳ್ಳಿ ಮಧ್ಯದಲ್ಲಿ ಇರುವ ಮಹದೇಶ್ವರಸ್ವಾಮಿಯ 87ನೇ ವರ್ಷದ ಜಾತ್ರಾ ಮಹೋತ್ಸವವನ್ನು ಶಿವರಾತ್ರಿ ನಂತರ ಏಳು ದಿನ ಆಚರಿಸಲಾಗುತ್ತಿದೆ.

‘87 ವರ್ಷಗಳ ಹಿಂದೆ ನಿಂಬೇಹಳ್ಳಿಯ ಜಂಗಮ ಗುರುಬಸಪ್ಪ ಮತ್ತು ಮಾದಲಗೆರೆಯ ನಂಜಪ್ಪ ಎಂಬುವವರು, ಪಕ್ಕದ ತೋಟಿ ಗ್ರಾಮದ ಕೆರೆ ಹಿಂಭಾಗ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಏಳು ಪಾಣಿಪಟ್ಟಲಿನ ಶಿವಲಿಂಗವನ್ನು ತಂದು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ, ಜಾತ್ರೆಯನ್ನು ಪ್ರಾರಂಭಿಸಿದರು ಎಂಬ ಇತಿಹಾಸ ಇದೆ’ ಎನ್ನುತ್ತಾರೆ ಮಾದಲಗೆರೆ ನಂಜೇಗೌಡ ಮತ್ತು ನಿಂಬೇಹಳ್ಳಿ ಶಿವರಾಮ್.

ಜಾತ್ರೆಯಲ್ಲಿ ರಥೋತ್ಸವ ನಡೆಯುವುದಿಲ್ಲ. ಭಕ್ತರು ದೇವರ ಮೆರವಣಿಗೆ ಮಾಡುತ್ತಾರೆ. ದೇವರ ಮೂಲ ವಿಗ್ರಹದ ಎದುರಿಗೆ ದೇವಾಲಯದ ಎರಡನೇ ಅಂಗಳದಲ್ಲಿ ಬಿಲ್ವಪತ್ರೆ ಮರವಿದ್ದು, ಇದರ ಎಲೆಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸುತ್ತಾರೆ. ಏಳು ದಿನ ನಡೆಯುವ ಜಾತ್ರೆಯಲ್ಲಿ, ಕೆಲವು ಭಕ್ತರು ಮಹದೇಶ್ವರಸ್ವಾಮಿಯ ಮಾಲೆಯನ್ನು ಧರಿಸಿ, 7ದಿನ ವ್ರತ ಆಚರಿಸುತ್ತಾರೆ. ಪ್ರತಿ ದಿನ ಅನ್ನದಾನ, ದೇವರ ಉತ್ಸವ, ವೀರಗಾಸೆ ಕುಣಿತ, ಭಜನೆ ಮತ್ತು ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿದೆ.

ಫೆ. 19ರಂದು ಮಾದಲಗೆರೆಯಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಮೂಲಸ್ಥಾನಕ್ಕೆ ಕರೆತಂದು, ಗಂಗಾಪೂಜೆ ನಂತರ ಧ್ವಜಾರೋಹಣ ಮಾಡುವ ಮೂಲಕ ಭಕ್ತರು ಜಾತ್ರೆಗೆ ಚಾಲನೆ ನೀಡಲಿದ್ದಾರೆ.

ಫೆ.22ರಂದು ಮಾದಲಗೆರೆ ಗ್ರಾಮಸ್ಥರಿಂದ ಕ್ರಿಕೆಟ್ ಪಂದ್ಯಾವಳಿ, 24ರಂದು ದಿ. ದಿವ್ಯಾ, ಸುನಿಲ್ ಕುಮಾರ್, ಅಜಿತ್ ಗೌಡ ಸ್ಮರಣಾರ್ಥ ತೋಟಿ ಮತ್ತು ತೋಟಿಕೊಪ್ಪಲು ಗ್ರಾಮಸ್ಥರು ಹಗಲು–ರಾತ್ರಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.

ಫೆ. 25ರಂದು ನಿರಂಜನ ಪ್ರಸಾದ್, ಶಿವಪ್ರಸಾದ್ ತಂಡದ ವೀರಭದ್ರನ ಕುಣಿತದೊಂದಿಗೆ ದೇವರ ಪಲ್ಲಕಿ ಉತ್ಸವ ಕಾರ್ಯಕ್ರಮವನ್ನು ಮಹದೇಶ್ವರ ಬಡಾವಣೆಯವರು ಹಮ್ಮಿಕೊಂಡಿದ್ದಾರೆ. ಚನ್ನರಾಯಟಪಟ್ಟಣ ಸ್ವಯಂಪೇರಿತ ರಕ್ತ ಕೇಂದ್ರ ಮತ್ತು ಹಾಸನದ ಇಂಡಿಯನ್ ಹಾರ್ಟ್ಫ್ ಲೈನ್ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ನಿಂಬೆಹಳ್ಳಿ ಗ್ರಾಮದವರಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ರಾಜ್ಯದ ನಾನಾ ಭಾಗದಲ್ಲಿರುವ ದೇವರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ಸೇವೆ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.