ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಮುಂದುವರೆದ ಐಟಿ ದಾಳಿ

Last Updated 15 ಮಾರ್ಚ್ 2018, 9:14 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಜವಳಿ ಉದ್ಯಮಿ ಬಿ.ಸಿ.ಶಿವಕುಮಾರ್‌ ಮತ್ತು ಬಿ.ಸಿ.ಉಮಾಪತಿ ಅವರ ಎರಡು ಮನೆ ಹಾಗೂ ಅವರಿಗೆ ಸೇರಿದ ಬಿ.ಎಸ್‌.ಚನ್ನಬಸಪ್ಪ ಅಂಡ್‌ ಸನ್ಸ್‌ ಹೆಸರಿನ 6 ಜವಳಿ ಅಂಗಡಿಗಳ ಮೇಲೆ ಬುಧವಾರ ಬೆಳಿಗ್ಗೆಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿತು.

ದಾವಣಗೆರೆ, ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ 23 ಅಧಿಕಾರಿಗಳ ತಂಡವು ಬೆಳಿಗ್ಗೆ 6 ಗಂಟೆಯಿಂದ ಏಕಕಾಲಕ್ಕೆ ಶಿವಕುಮಾರ್‌ ಹಾಗೂ ಉಮಾಪತಿ ಅವರಿಗೆ ಸೇರಿದ ಶಾಮನೂರು ರಸ್ತೆ ಹಾಗೂ ಎಂ.ಸಿ.ಸಿ. ‘ಎ’ ಬ್ಲಾಕ್‌ನಲ್ಲಿರುವ ಎರಡು ಮನೆಗಳ ಮೇಲೆ ಈ ದಾಳಿ ನಡೆಸಿತು.

ಕಾಳಿಕಾದೇವಿ ರಸ್ತೆ, ಡೆಂಟಲ್‌ ಕಾಲೇಜು ರಸ್ತೆ, ಎವಿಕೆ ಕಾಲೇಜು ರಸ್ತೆಯಲ್ಲಿನ ಒಟ್ಟು 6 ಜವಳಿ ಮಳಿಗೆಗಳ ಮೇಲೆ ದಾಳಿ ನಡೆದಿದೆ. ದಾಖಲೆ ಪರಿಶೀಲನೆ ನಡೆಸಲಾಗಿದೆ. ಸಮರ್ಪಕ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT