ಹೆತ್ತೂರು: ಪ್ರಾಕೃತಿಕ ಅಸಮತೋಲನವೋ? ವರುಣದೇವನ ಮುನಿಸೋ? ಮನುಷ್ಯನ ಸ್ವಯಂಕೃತ ಅಪರಾಧವೋ? ಈ ಬಾರಿ ಸಮರ್ಪಕ ಮಳೆ ಇಲ್ಲದೇ ಜಲಮೂಲಗಳು ಬತ್ತಿ ಹೋಗಿದ್ದು, ಕೆರೆ, ಕಟ್ಟೆ, ಕಾಫಿ ಬೆಳೆ ಹಾಗೂ ಗಿಡಗಳು ಒಣಗುತ್ತಿವೆ.

ಈ ಹೊತ್ತಿಗೆ ಮಳೆಯಾಗಿ ನೆನೆದ ಮಣ್ಣು ವಾಸನೆ ಬೀರುತ್ತಿತ್ತು. ಬಾನಾಡಿಗಳು ಸಂತಸದಿಂದ ಹಾರಾಡುತ್ತಿದ್ದವು. ಆದರೆ, ಈ ವರ್ಷ ಇನ್ನೂ ವರುಣನ ಸುಳಿವೇ ಇಲ್ಲ.

ಮಲೆನಾಡು ಪ್ರದೇಶದಲ್ಲೂ ಶುದ್ದ ಕುಡಿಯುವ ನೀರಿಗೆ, ಜಾನುವಾರುಗಳು ಮೇವಿಗೂ ಪರದಾಡುವ ಸ್ಥಿತಿ ಇದೆ. ಮಲೆನಾಡು ಜನರ ಆದಾಯದ ಮೂಲವಾಗಿರುವ ಕಾಫಿ, ಏಲಕ್ಕಿ, ಕಾಳುಮೆಣಸು ಹಾಗೂ ಅಡಿಕೆ ಬೆಳೆಗೂ ಸಂಕಷ್ಟ ಶುರುವಾಗಿದೆ.

'ಈ ಬಾರಿ ಮಳೆ ಬಾರದಿರುವುದು ಫಸಲಿಗೆ ನೇರ ಹೊಡೆತ ಬೀದ್ದಿದೆ. ಇದನ್ನೇ ನಂಬಿದವರ ಬದುಕು ದುಸ್ತರವಾಗಿದೆ. ಕೆರೆ, ಕೊಳವೆಬಾವಿ ಹೊಂದಿದವರೂ 2 ರಿಂದ 3 ಬಾರಿ ನೀರು ಹಾಯಿಸುತ್ತಿದ್ದರು. ಈಗ ಅಂತರ್ಜಲ ಬತ್ತಿ ಹೋಗಿ ನೀರಿಲ್ಲದಂತಾಗಿದೆ. ಮಳೆ ಬಂದರೂ ಕುಂಠಿತವಾಗುತ್ತದೆ’ ಎಂದು ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಗಂಗಾಧರ ಕೆ.ಬಿ. ಹೇಳಿದರು.

ಎರಡು ತಿಂಗಳಿಂದ ಸೂರ್ಯನ ಪ್ರಖರತೆ ಅಧಿಕವಾಗಿದ್ದು, ಬಿಸಿಲಿನ ಝಳ ಹೆಚ್ಚಾಗಿದೆ. ಶೆಖೆ ತಡೆಯಲಾಗದೇ ಜನರು ಒದ್ದಾಡುತ್ತಿದ್ದಾರೆ. ಪಶ್ಚಿಮ ಘಟ್ಡ ಅಂಚಿನ ಗ್ರಾಮ ಅತ್ತಿಹಳ್ಳಿ ಗ್ರಾಮದಲ್ಲಿ 39 ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ವಾಡಿಕೆಯಂತೆ ಪ್ರತಿ ವರ್ಷ ಮಾರ್ಚ್ ಆರಂಭದಲ್ಲಿ ಮಳೆ ಆಗಬೇಕಿತ್ತು. ಸಕಲೇಶಪುರ ತಾಲ್ಲೂಕಿನ ಮಟ್ಟಿಗೆ ಹೆಸರಾಗಿರುವ ‘ಹೂಮಳೆ’ಗೆ ಕಾಫಿಯ ಹೂಗಳು ಅರಳುತ್ತಿದ್ದವು. ನೀರಿನ ಸೆಲೆಗಳಲ್ಲಿ ಅಂತರ್ಜಲ ಹೆಚ್ಚುತ್ತಿತ್ತು. ಮೇ ತಿಂಗಳು ಬಂದರೂ ಉತ್ತಮ ಮಳೆಯ ಸುಳಿವೇ ಇಲ್ಲ. ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೂ, ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಮಳೆಯನ್ನೇ ಆಶ್ರಯಿಸಿರುವ ಕಾಫಿ ಗಿಡಗಳು ಒಣಗಿವೆ. ಮಂಜಿನ ಹನಿಗಳಿಗೆ ಮೈದಳೆದು ಅರಳುತ್ತಿರುವ ಮೊಗ್ಗುಗಳು ಬಿಸಿಲಿನ ಝಳಕ್ಕೆ ಒಣಗಿ ಕರಕಲಾಗುತ್ತಿವೆ. ಮಳೆ ಬಂದರೂ ಚೇತರಿಸಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಒರತೆ ಸಹ ಇಂಗುತ್ತಿರುವ ಕಾರಣ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

ಪ್ರಸ್ತುತ ಹವಾಗುಣ ಕಾಫಿ ಗಿಡಗಳಿಗೆ ಅಪಾಯಕಾರಿ. ತೋಟಗಳಲ್ಲಿ ನೆರಳಿನ ಆಸರೆ ಕಡಿಮೆ ಇದೆ. ಅಲ್ಲದೇ ರೊಬಸ್ಟಾ ಹಾಗೂ ಅರೇಬಿಕಾ ಗಿಡಗಳ ಬೇರುಗಳು ಅಳಕ್ಕಿಳಿಯದ ಕಾರಣ ನೀರಿನಾಂಶ ಕಡಿಮೆಯಾಗಿ ಸರ್ವ ಕಳೆದುಕೊಂಡು ಗಿಡಗಳು ಜೀವ ಕಳೆದುಕೊಳ್ಳುತ್ತಿವೆ. ಹೀಗಾಗಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-36-950219122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.