ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 16 ಲಕ್ಷ ಲಪಟಾಯಿಸಲು ಕಥೆ ಸೃಷ್ಟಿಸಿ ಪೊಲೀಸ್‌ ಬಲೆಗೆ ಬಿದ್ದ

ಮಾಲೀಕರಿಗೆ ಹಣ ತಲುಪಿಸಿದ ಪೊಲೀಸರು
Last Updated 6 ಡಿಸೆಂಬರ್ 2020, 6:32 IST
ಅಕ್ಷರ ಗಾತ್ರ

ಬೇಲೂರು: ಶ್ರಮವಿಲ್ಲದೆ ಕೈ ಸೇರಿದ್ದ ₹ 16 ಲಕ್ಷ ಹಣವನ್ನು ಜೇಬಿಗಿಳಿಸಿಕೊಳ್ಳಲು ಸಿನಿಮಾದಂತೆ ಕಥೆ ಹಣೆದಿದ್ದ ಅರೇಹಳ್ಳಿ ನಿವಾಸಿ ಮಹಮದ್‌ ತಾರಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಬಾಳೆಗದ್ದೆ ನಿವಾಸಿ ದಿನೇಶ್‌ ಎಂಬುವವರಿಗೆ ಸೇರಿದ್ದ ₹ 16.80 ಲಕ್ಷ ಹಣವನ್ನು ಲಪಟಾಯಿಸಲು ಮಹಮದ್‌ ಸಂಚು ರೂಪಿಸಿದ್ದ. ಡಿ. 2ರಂದು ದಿನೇಶ್‌ ಅವರನ್ನು ಭೇಟಿಯಾಗಿದ್ದ ಮಹಮದ್‌ ತಾರಿಕ್‌ ಕಾಳುಮೆಣಸನ್ನು ಮಾರಾಟ ಮಾಡಿಕೊಡುತ್ತೇನೆಂದು ಹೇಳಿ ತೆಗೆದುಕೊಂಡು ಹೋಗಿದ್ದ. ಚಿಕ್ಕಮಗಳೂರಿನಲ್ಲಿ ಕಾಳುಮೆಣಸು ಮಾರಾಟ ಮಾಡಿ, ವಾಪಸ್‌ ಬರುವಾಗ ರಾತ್ರಿ ತಾಲ್ಲೂಕಿನ ಫಾತೀಮಾಪುರದ ಬಳಿ ಕಾರು ಅಪಘಾತವಾಗಿದೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ತಾರಿಕ್, ತನ್ನ ಮೇಲೆ ಅಪರಿಚಿತರು ಹಲ್ಲೆ ನಡೆಸಿ, ಹಣ ತೆಗೆದುಕೊಂಡು ಹೋಗಿದ್ದಾರೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರವಾಣಿ ಮೂಲಕ ದಿನೇಶ್‌ ಅವರಿಗೆ ವಿಷಯ ತಿಳಿಸಿದ್ದ.

ಬೆಳೆಯಿಂದ ಬಂದ ಅಪಾರ ಹಣ ಹೋಯಿತಲ್ಲಾ ಎಂದು ಆತಂಕಗೊಂಡ ದಿನೇಶ್‌ ಅರೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮಹಮದ್ ದಾಖಲಾಗಿದ್ದ ಆಸ್ಪತ್ರೆಗೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಹೇಶ್ ತೆರಳಿ ವಿಚಾರಿಸಿದಾಗ ಹಣ ಲಪಟಾಯಿಸಲು ಸುಳ್ಳು ಕಥೆ ಸೃಷ್ಟಿಸಿರವುದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ
ಬಂಧಿಸಿ, ಹಣ ಪಡೆದು ದಿನೇಶ್‌ಗೆ ತಲುಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT