ಕಿಕ್ಕೇರಿ: ಹೋಬಳಿಯ ಗಡಿಭಾಗವಾದ ಹಳೆಮಾದಾಪುರ, ಗಾಣದಹಳ್ಳಿ ಮತ್ತಿತರ ಪ್ರದೇಶದ ನಾಲೆಯಲ್ಲಿ ಹೂಳು ತುಂಬಿ, ಜೊಂಡು ಬೆಳೆದಿದ್ದು, ಬೇಸಾಯಕ್ಕೆ ನೀರು ಹರಿಯುತ್ತಿಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗಿದೆ.

ಈ ಪ್ರದೇಶದಲ್ಲಿ ಹೇಮಾವತಿ ನದಿ ಹರಿಯಲಿದ್ದು, ಇಲ್ಲಿನ ರೈತರಿಗೆ ಆಸರೆಯಾಗಿದೆ. ಹೇಮಾವತಿ ನದಿಯ ಶ್ರೀರಾಮ ದೇವರ ಉತ್ತರ ನಾಲೆ ನೀರು ಇದಾಗಿದ್ದು, ಬೇಸಿಗೆ ಕಾಲದಲ್ಲಿ ನೀರು ಇಲ್ಲವಾದರೆ, ಮಳೆಗಾಲದಲ್ಲಿ ನಾಲೆ ತುಂಬಾ ನೀರು ಹರಿಯುತ್ತಿರುವುದರಿಂದ ರೈತರ ಕೃಷಿ ಭೂಮಿಗೆ ಮಾತ್ರ ನೀರು ಇಲ್ಲದಂತಾಗಿದೆ.

‘ನಾಲೆಯ ನೀರು ಹಾಸನ ಜಿಲ್ಲೆಯ ಅಡಗೂರು ಮಾರ್ಗವಾಗಿ ಜಿಲ್ಲೆಯ ಗಡಿಭಾಗವಾದ ಚಿಕ್ಕತರಹಳ್ಳಿಗೆ ಹರಿದು ಬರಲಿದ್ದು, ಚನ್ನರಾಯಪಟ್ಟಣ ಮತ್ತಿತರ ಪ್ರದೇಶದಲ್ಲಿನ ತ್ಯಾಜ್ಯ, ಮಲಮೂತ್ರ ನಾಲೆಯ ನೀರಿಗೆ ಸೇರಿ ಹರಿದು ಬರುತ್ತಿರುವುದೇ ಜೊಂಡು ಬೆಳೆಯಲು ಕಾರಣ’ ಎಂಬುದು ರೈತರ ಆರೋಪ.

ಚಿಕ್ಕತರಹಳ್ಳಿಯಿಂದ ಬೋಳಮಾರನಹಳ್ಳಿ ಕೆರೆಗೆ ನಾಲೆ ಸೇರಿ ಇಲ್ಲಿಂದ ಊಗಿನಹಳ್ಳಿ ಮಾರ್ಗವಾಗಿ ಎರಡು ಭಾಗವಾಗಿ ನಾಲೆಯ ನೀರು ಹರಿಯಲಿದೆ. ಬಿದರಹಳ್ಳಿ ಮತ್ತೊಂದು ಹಳೆ ಮಾದಾಪುರ ಕಡೆಗೆ ನೀರು ಹರಿಯಲಿದೆ. ಹಳೆ ಮಾದಾಪುರದ ನಾಲೆ ದುರಸ್ತಿ ಕಾಣದೆ ನಾಲೆ ತುಂಬಾ ಹೂಳು ತುಂಬಿದ್ದು, ಜೊತೆಗೆ ಬೃಹತ್ ಪ್ರಮಾಣದಲ್ಲಿ ಜೊಂಡು ಬೆಳೆದಿದೆ. ನಾಲೆಯಲ್ಲಿ ನೀರು ಹರಿಯುವ ಬದಲು ನಾಲೆ ಏರಿ ಮೇಲೆ ನೀರು ಹರಿಯುವಂತಾಗಿದೆ. ಜೋರು ನೀರು ಹರಿದಾಗ ನಾಲೆ ಏರಿ ಬಳಿಯ ರೈತರ ಜಮೀನಿಗೆ ನುಗ್ಗಿ ಅಪಾರವಾಗಿ ಹಾನಿಯಾಗುವುದು ಸಾಮಾನ್ಯವಾಗಿದೆ ಎಂಬ ರೋದನೆ ಇಲ್ಲಿನ ರೈತರದ್ದು.

ಹಲವು ವರ್ಷಗಳಿಂದ ನಾಲೆ ದುರಸ್ತಿಯಾಗದೇ ಅಧಿಕಾರಿಗಳು ಕಾಟಾಚಾರಕ್ಕೆ ನಾಲೆ ಜೊಂಡು ತೆಗೆಯುವ ಶಾಸ್ತ್ರ ಮಾಡುವುದರಿಂದ ಪ್ರಯೋಜನವಾಗುತ್ತಿಲ್ಲ. ಈ ಪ್ರದೇಶದಲ್ಲಿನ ಮಾದಾಪುರ, ಗಾಣದಹಳ್ಳಿ, ಕೋಟಹಳ್ಳಿ, ಚಿನ್ನೇನಹಳ್ಳಿ ಮತ್ತಿತರ ಪ್ರದೇಶಗಳ ರೈತರಿಗೆ ಅನುಕೂಲವಾಗುವಂತೆ ತ್ವರಿತವಾಗಿ ಹೂಳು ತೆಗೆದು, ಜೊಂಡು ತೆರವು ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು’ ಎಂದು ರೈತ ಮಂಜೇಗೌಡ ಆಗ್ರಹಿಸುತ್ತಾರೆ.

‘ನಾಲೆಯಲ್ಲಿ ಜೊಂಡು ಬೆಳೆದಿರುವುದರಿಂದ ದಂಡೆಯಲ್ಲಿರುವ ಗ್ರಾಮಗಳಿಗೆ ಸೊಳ್ಳೆಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಮಾದಾಪುರದ ಬಳಿಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ನಾಲೆಯಲ್ಲಿ ಜೊಂಡು ಅಧಿಕವಾಗಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ.

ಶ್ರೀರಾಮದೇವರ ನಾಲೆ ಶ್ರವಣಬೆಳಗೊಳ ನಾಲಾ ವಿಭಾಗಕ್ಕೆ ಬರಲಿದ್ದು, ರೈತರ ಬೇಸಾಯಕ್ಕೆ ಮೊದಲು ನಾಲೆ ದುರಸ್ತಿಯಾಗಬೇಕಿದ್ದು, ತುರ್ತು ಕ್ರಮವ ಅಧಿಕಾರಿಗಳಿಗೆ ತಿಳಿಸಲಾಗುವುದು
ಎಚ್.ಟಿ. ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.