ಮನೆಗಳು ಮುಳುಗಡೆ, ರಸ್ತೆ ಸಂಪರ್ಕ ಕಡಿತ

7
ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂ ಕುಸಿತ, ಮಣ್ಣಿನಲ್ಲಿ ಸಿಲುಕಿದ ಬಸ್‌

ಮನೆಗಳು ಮುಳುಗಡೆ, ರಸ್ತೆ ಸಂಪರ್ಕ ಕಡಿತ

Published:
Updated:
Deccan Herald

ಹಾಸನ: ಮಳೆನಾಡು ಭಾಗದಲ್ಲಿನ ವರ್ಷಧಾರೆ ಜನರನ್ನು ಭಯಭೀತಗೊಳಿಸಿದೆ. ಅತಿಯಾದ ಶೀತದಿಂದ ರಸ್ತೆಗಳು ಬಾಯ್ತೆರೆಯುತ್ತಿದ್ದರೆ, ಗುಡ್ಡಗಳು ಧರೆಗುರುಳುತ್ತಿವೆ. ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡು, ವಿದ್ಯುತ್ ಕೂಡ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಕೊಡಗಿನಲ್ಲಿ ಮಹಾ ಮಳೆ ಹಿನ್ನೆಲೆಯಲ್ಲಿ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ತತ್ತರಿಸಿದೆ. ಕಾವೇರಿ ನದಿ ಉಕ್ಕಿ ಹರಿದು

ಗ್ರಾಮದೊಳಗ್ಗೆ ನೀರು ನುಗ್ಗಿ 150ಕ್ಕೂ ಹೆಚ್ಚು ಮನೆಗಳು ಮಳುಗಡೆಯಾದರೆ, ಹಲವು ಮನೆಗಳು ಕುಸಿದು ಬಿದ್ದಿವೆ. ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ರಾಮನಾಥಪುರ ಮಾರ್ಗವಾಗಿ ಮೈಸೂರು ಇತರೆಡೆಗೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ. ಜನರು ತಮ್ಮ ಮನೆಯ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಹೆಣಗಾಡುತ್ತಿದ್ದಾರೆ. ಸಾವಿರಾರು ಜನರಿಗೆ ಗಂಜಿ ಕೇಂದ್ರ ತೆರೆದು ರಕ್ಷಣೆ ನೀಡಲಾಗಿದ್ದು, ಸ್ಥಳೀಯ ಶಾಸಕ ಎ.ಟಿ.ರಾಮಸ್ವಾಮಿ ಖುದ್ದು ತೆಪ್ಪದಲ್ಲಿ ಪ್ರಯಾಣ ಮಾಡಿ ಪರಿಸ್ಥಿತಿ ಅವಲೋಕನ ಮಾಡಿ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು. ತಹಶೀಲ್ದಾರ್ ನಂದೀಶ್, ಇತರೆ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದಾರೆ. 

ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆ ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ.

ಹೆತ್ತೂರು ಹೋಬಳಿ ಮಾಗೇರಿ ಬಳಿ ಸುಮಾರು 600 ಅಡಿ ಉದ್ದದ ರಸ್ತೆ ಕುಸಿದು, ಸೋಮವಾರಪೇಟೆ-ಸಕಲೇಶಪುರ ರಸ್ತೆ ಸಂಪರ್ಕ ಕಡಿತವಾಗಿದೆ.

ಹರಗರಹಳ್ಳಿ-ಕಾಗಿನಹರೆ ಮಾರ್ಗದಲ್ಲಿ ರಸ್ತೆ ಭೂ ಕುಸಿತದಿಂದ ಸಾರಿಗೆ ಬಸ್ ಚಕ್ರಗಳು ಮಣ್ಣಿನಲ್ಲಿ ಹೂತುಕೊಂಡಿವೆ. ಚಿಕ್ಕಮಗಳೂರು ವಿಭಾಗಕ್ಕೆ ಸೇರಿದ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ವಾಹನದಲ್ಲಿ ಕಳುಹಿಸಿ ಕೊಡಲಾಗಿದೆ. ಸತತ ಮಳೆಯಿಂದ ಭೂಮಿ ಶೀತದಿಂದ ಕೂಡಿದ್ದು, ಮಣ್ಣಿನ ಸವಕಳಿಯಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !