ಶನಿವಾರ, ಆಗಸ್ಟ್ 13, 2022
27 °C

₹ 25 ಸಾವಿರ ಮೌಲ್ಯದ ಗಾಂಜಾ ಗಿಡ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಶ್ರವಣಬೆಳಗೊಳ ಹೋಬಳಿ ಕುಂಬೇನಹಳ್ಳಿಯ ಜಮೀನಿನಲ್ಲಿ ಬೆಳೆದಿದ್ದ ₹ 25 ಸಾವಿರ ಮೌಲ್ಯದ 1.170 ಕೆ.ಜಿ ಗಾಂಜಾ ಗಿಡವನ್ನು ಸೋಮವಾರ ವಶ ಪಡಿಸಿಕೊಳ್ಳಲಾಗಿದೆ.

ಸುಮಿತ್ರಾ ಮತ್ತು ಅವರ ಪುತ್ರ ನವೀನ ಎಂಬುವರ ಜಮೀನಿನಲ್ಲಿ ಗಾಂಜಾ ಗಿಡ ಬೆಳೆಯಲಾಗಿತ್ತು. ಆರೋಪಿ ಸುಮಿತ್ರಾ

ಅವರನ್ನು ಬಂಧಿಸಲಾಗಿದ್ದು, ನವೀನ ತಲೆ ಮರೆಸಿಕೊಂಡಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸಿಪಿಐ ಬಿ.ಜಿ.ಕುಮಾರ್, ಪಿಎಸ್‌ಐ ಶ್ರೀನಿವಾಸ್, ಹೇಮಾವತಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಮತ್ತು ಎಎಸ್‌ಐ ಉಮೇಶ್, ಸಿಬ್ಬಂದಿ ಮಹೇಶ್, ರಾಮಕೃಷ್ಣ, ವಾಣಿ, ಪ್ರದೀಪಕುಮಾರ್, ಲೋಕೇಶ್, ಶಿವಕುಮಾರ್, ಅನಿಲ್ ಕುಮಾರ್ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.