ಹಾಸನ: ವೈದ್ಯಕೀಯ ನಿರ್ಲಕ್ಷ್ಯದಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ₹16.35 ಲಕ್ಷ ಪರಿಹಾರ ಒದಗಿಸುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.

ಹೊಳೆನರಸೀಪುರದ ರಾಮಚಂದ್ರ ಎಂ. ಅವರ ತಮ್ಮ ಪತ್ನಿ ಶೋಭಾ (41) ಅವರು 2024 ರ ಜುಲೈ 10 ರಂದು ಬೆನ್ನುನೋವಿನ ಸಮಸ್ಯೆಯಿಂದ ನಗರದ ಜನಪ್ರಿಯ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಸಂಜೆ ಆಸ್ಪತ್ರೆಯ ಡಾ. ಅಮೋಘ ಗೌಡ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ವೇಳೆ ಶೋಭಾ ಅವರ ರಕ್ತನಾಳಕ್ಕೆ ಹಾನಿಯಾಗಿದ್ದು, ರಕ್ತಸ್ರಾವವಾಗಿತ್ತು. ಸೂಕ್ತ ಮುನ್ನೆಚ್ಚರಿಕೆ ಅಥವಾ ತಕ್ಷಣ ಚಿಕಿತ್ಸೆ ನೀಡಿರಲಿಲ್ಲ. ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ 2024 ರ ಜುಲೈ 11 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ವೈದ್ಯ ಡಾ.ಕಾರ್ತಿಕ್ ರಾವ್ ಅವರು ಪ್ರಾಥಮಿಕ ಪರೀಕ್ಷೆ ನಡೆಸುವಾಗಲೇ, ಶೋಭಾ ಮೃತಪಟ್ಟಿದ್ದರು.

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾನ್ಯೂನತೆಗೆ ಸಂಬಂಧಿಸಿ ₹50 ಲಕ್ಷ ಪರಿಹಾರ ಕೋರಿ ರಾಮಚಂದ್ರ ಎಂ. ಅವರು 2024 ರ ಆಗಸ್ಟ್ 30ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ., ಸದಸ್ಯೆ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠ, ಪ್ರಕರಣದ ದಾಖಲೆಗಳು, ವೈದ್ಯಕೀಯ ವರದಿಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿತು. ಶಸ್ತ್ರಚಿಕಿತ್ಸೆ ಸರಿಯಾಗಿ ನಡೆಸಲಾಗಿದೆ ಎಂಬುದಕ್ಕೆ ಸಮರ್ಪಕ ದಾಖಲೆಗಳಿಲ್ಲದೇ, ಪ್ರಾಥಮಿಕ ಚಿಕಿತ್ಸೆ ವಿಧಾನಗಳನ್ನು ಅನುಸರಿಸದೇ, ಅವಸರವಾಗಿ ಶಸ್ತ್ರಚಿಕಿತ್ಸೆಗೆ ಮುಂದಾದದ್ದು ಪ್ರಶ್ನಾರ್ಥಕ ಎಂದು ಹೇಳಿತು. ತಕ್ಷಣ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಳಂಬವಾಗಿರುವುದು ಕಂಡುಬಂದಿದ್ದು,

ತಡವಾಗಿ ಉನ್ನತ ಚಿಕಿತ್ಸೆಗೆ ರವಾನಿಸಿರುವುದು ವೈದ್ಯಕೀಯ ನಿರ್ಲಕ್ಷ್ಯ ಎಂದು ಅಭಿಪ್ರಾಯಪಟ್ಟಿದೆ. ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯವರು ₹2.45 ಲಕ್ಷ, ಜನಪ್ರಿಯ ಆಸ್ಪತ್ರೆಯ ನಿರ್ದೇಶಕ ಮತ್ತು ವೈದ್ಯ ಡಾ.ಅಮೋಘ ಗೌಡ ₹13,40,189 ಪರಿಹಾರವಾಗಿ ನೀಡಬೇಕು. ಜೊತೆಗೆ ₹50ಸಾವಿರ ವೆಚ್ಚವನ್ನು ಆದೇಶವಾದ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ.

ತಪ್ಪಿದ್ದಲ್ಲಿ ಸಂಪೂರ್ಣ ಮೊತ್ತದ ಮೇಲೆ ಶೇ 10ರಷ್ಟು ಬಡ್ಡಿಯೊಂದಿಗೆ ಪಾವತಿಸುವಂತೆ ತಿಳಿಸಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಮತ್ತು ಅಲ್ಲಿ ವೈದ್ಯ ಡಾ.ಕಾರ್ತಿಕ್ ರಾವ್ ವಿರುದ್ಧದ ಪ್ರಕರಣವನ್ನು ವಜಾ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.