ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು |ಸಭೆಯಲ್ಲಿ ವಾಗ್ವಾದ: ಕುರ್ಚಿ ಚೆಲ್ಲಾಪಿಲ್ಲಿ

ಸಾಲ ವಸೂಲಾತಿಗೆ ಮೈಕ್ರೊ ಫೈನಾನ್ಸ್‌ ಕಿರುಕುಳ: ಆರೋಪ
Last Updated 24 ಡಿಸೆಂಬರ್ 2019, 16:52 IST
ಅಕ್ಷರ ಗಾತ್ರ

ಬೇಲೂರು: ಸಾಲದ ಹಣ ವಸೂಲಾತಿಗಾಗಿ ಮೈಕ್ರೊ ಫೈನಾನ್ಸ್‌ ಕಂಪನಿಗಳು ನೀಡುತ್ತಿರುವ ಕಿರುಕುಳ, ದೌರ್ಜನ್ಯದ ವಿರುದ್ಧ ಚರ್ಚಿಸಲು ಮಂಗಳವಾರ ಇಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಕೈಕ ಕೈ ಮಿಲಾಯಿಸಿದರು. ಆಗ ಕೆಲವರು ಕುರ್ಚಿಗಳು ಎತ್ತಿ ಹಾಕಿದರು.

ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಮೈಕ್ರೊ ಫೈನಾನ್ಸ್‌ ಕಂಪನಿಗಳು ಸಾಲದ ಹಣಕ್ಕಾಗಿ ಮಹಿಳೆಯರು ಮತ್ತು ಜನರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಚರ್ಚಿಸಲು ಇಲ್ಲಿನ ಋಣಮುಕ್ತ ಸಂಸ್ಥೆ ಚನ್ನಕೇಶವ ಸಭಾಂಗಣದಲ್ಲಿ ಸಭೆ ಏರ್ಪಡಿಸಿತ್ತು. ಮಹಿಳೆಯರನ್ನೊಳಗೊಂಡಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.

ಋಣಮುಕ್ತ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ.ಭಟ್‌ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ ಮೈಕ್ರೊ ಫೈನಾನ್ಸ್‌ ಕಂಪನಿಗಳು ನೀಡುತ್ತಿರುವ ಕಿರುಕುಳದ ವಿರುದ್ಧ ಮಾತನಾಡುತ್ತಿದ್ದರು. ಈ ವೇಳೆ ಮಹಿಳೆಯರು ಮತ್ತು ಜನರೊಂದಿಗೆ ಏಕಾಏಕಿ ಸಭಾಂಗಣಕ್ಕೆ ಬಂದ ಮೈಕ್ರೊ ಫೈನಾನ್ಸ್‌ ಕಂಪನಿಯ ಕೆಲ ನೌಕರರು ‘ಪಡೆದಿರುವ ಸಾಲದ ಹಣವನ್ನು ಏಕೆ ಪಾವತಿಸುವುದಿಲ್ಲ. ಹಣ ಕೇಳುವುದು ತಪ್ಪೇ’ ಎಂದು ಪ್ರಶ್ನಿಸಿದರು.

ಇದು ಸಾಲ ಪಡೆದ ಜನರು ಮತ್ತು ಮೈಕ್ರೊ ಫೈನಾನ್ಸ್‌ ಕಂಪನಿಗಳ ಸಿಬ್ಬಂದಿ ನಡುವೆ ಘರ್ಷಣೆಗೆ ಕಾರಣವಾಯಿತು. ಪರಸ್ಪರ ಕೈಕೈ ಮಿಲಾಯಿಸಿದ ಎರಡು ಗುಂಪುಗಳು ಕುರ್ಚಿಗಳನ್ನು ಕಿತ್ತೆಸೆದರು. ಈ ಹಂತದಲ್ಲಿ ಸಭೆ ಗದ್ದಲ, ಗೊಂದಲದಿಂದ ಕೂಡಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಲಭೆ ನಿರತರನ್ನು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ನಂತರ ಬಿಡುಗಡೆ ಮಾಡಿದರು.

ಸಭೆಯಲ್ಲಿ ಜೆಡಿಎಸ್‌ ಮುಖಂಡ ಬಿ.ಸಿ.ಜಗದೀಶ್‌, ಕಾಂಗ್ರೆಸ್‌ ಮುಖಂಡ ಇಕ್ಬಾಲ್‌, ಎಂ.ಜಿ. ನಿಂಗರಾಜು ಸೇರಿದಂತೆ ಹಲವು ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT